ಪೂರ್ವ ನಿರ್ಧಾರದಂತೆ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ರಿಕೆಟ್ ಆಸ್ಟ್ರೇಲಿಯಾ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಗ್ಗೆ ಅನುಮಾನಗಳಿದ್ದು, ಪೂರ್ವ ನಿರ್ಧಾರಿತ ವೇಳಾಪಟ್ಟಿಯ ಪ್ರಕಾರ ಮೊದಲ ಟೆಸ್ಟ್ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸ್ಪಷ್ಟಪಡಿಸಿದೆ.
Published: 16th November 2020 05:26 PM | Last Updated: 16th November 2020 05:26 PM | A+A A-

ಟೀಮ್ ಪೈನ್
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಗ್ಗೆ ಅನುಮಾನಗಳಿದ್ದು, ಪೂರ್ವ ನಿರ್ಧಾರಿತ ವೇಳಾಪಟ್ಟಿಯ ಪ್ರಕಾರ ಮೊದಲ ಟೆಸ್ಟ್ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸ್ಪಷ್ಟಪಡಿಸಿದೆ.
ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕ ಪ್ರಕರಣದಲ್ಲಿ ಇತ್ತೀಚಿನ ಪ್ರಕರಣಗಳ ನಂತರ ನಾಯಕ ಟಿಮ್ ಪೈನ್ ಸೇರಿದಂತೆ ಆಸ್ಟ್ರೇಲಿಯಾದ ಕೆಲವು ಆಟಗಾರರು ಕ್ವಾರಂಟೈನ್ಗೆ ಹೋಗಬೇಕಾಯಿತು.
ಪಶ್ಚಿಮ ಆಸ್ಟ್ರೇಲಿಯಾ, ಟ್ಯಾಸ್ಮೆನಿಯಾ ಮತ್ತು ಉತ್ತರ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ಹೀಗಾಗಿ ಅಡಿಲೇಡ್ ನಲ್ಲಿ ಮೊದಲ ಟೆಸ್ಟ್ ಪಂದ್ಯಗಳ ಬಗ್ಗೆ ಅನುಮಾನ ಎದ್ದಿತ್ತು.
ಇದಕ್ಕೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಡಿಸೆಂಬರ್ 17ರಂದು ಅಡಿಲೇಡ್ ನಲ್ಲೇ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ ಎಂದರು.