ಟೀಮ್ ಇಂಡಿಯಾದ 2021ರ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಕೊರೋನಾ ಸೋಂಕಿನಿಂದ 2020ರಲ್ಲಿ ಸಂಪೂರ್ಣ ವಿರಾಮದಲ್ಲಿದ್ದ ಭಾರತ ಕ್ರಿಕೆಟ್ ತಂಡ 2021ನೇ ಸಾಲಿನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು

ನವದೆಹಲಿ: ಕೊರೋನಾ ಸೋಂಕಿನಿಂದ 2020ರಲ್ಲಿ ಸಂಪೂರ್ಣ ವಿರಾಮದಲ್ಲಿದ್ದ ಭಾರತ ಕ್ರಿಕೆಟ್ ತಂಡ 2021ನೇ ಸಾಲಿನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಪ್ರವಾಸದ ಮೂಲಕ 2020ರಲ್ಲಿ ಕೊನೆಯ ಸರಣಿ ಆಡಲಿರುವ ಟೀಮ್ ಇಂಡಿಯಾ, ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಜನವರಿ-ಫೆಬ್ರವರಿ- ಮಾರ್ಚ್ ಅವಧಿಯಲ್ಲಿ ತಲಾ 4 ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನು ಆಡುವ ನಿರೀಕ್ಷೆ ಇದೆ.

ನಂತರ ಮಾರ್ಚ್- ಏಪ್ರಿಲ್ - ಮೇ ಅವಧಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಆಟಗಾರರು, ಜೂನ್ ನಲ್ಲಿ ಕೈಗೊಳ್ಳಲಿರುವ ಶ್ರೀಲಂಕಾ ಪ್ರವಾಸದಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನಾಡಲಿದೆ.

ಜೂನ್-ಜುಲೈನಲ್ಲಿ 2021ರ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡ, ಆರು ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಜುಲೈನಲ್ಲಿ ಜಿಂಬಾಬ್ವೆ ಪ್ರವಾಸ ಮಾಡಲಿರುವ ಭಾರತ, 3 ಏಕದಿನ ಪಂದ್ಯಗಳನ್ನು ಆಡಲಿದೆ.

ಜುಲೈ-ಆಗಸ್ಟ್ -ಸೆಪ್ಟೆಂಬರ್ ಅವಧಿಯಲ್ಲಿ ಇಂಗ್ಲೆಂಡ್ ಪ್ರವಾಸ ನಡೆಸಲಿರುವ ವಿರಾಟ್ ಕೊಹ್ಲಿ ಬಳಗ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನಂತರ ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಟೀಮ್ ಇಂಡಿಯಾ ಆಟಗಾರರು, ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ.

ಇದಾದ ನಂತರ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧ ನವೆಂಬರ್- ಡಿಸೆಂಬರ್ ಅವಧಿಯಲ್ಲಿ 2 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಆಡಲಿರುವ ಭಾರತ ತಂಡ, ಡಿಸೆಂಬರ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com