11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್‌ ದಂಪತಿ

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು.

Published: 20th November 2020 04:53 PM  |   Last Updated: 20th November 2020 04:53 PM   |  A+A-


AB De Villiers-Danielle

ಡಿವಿಲಿಯರ್ಸ್-ಡೇನಿಯಲ್

Posted By : Vishwanath S
Source : UNI

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು.

ಇದಕ್ಕೂ ಮುನ್ನ ಎಬಿಡಿ ಇಬ್ಬರು ಅಬ್ರಹಾಂ ಡಿ ವಿಲಿಯರ್ಸ್ ಹಾಗೂ ಜಾನ್‌ ರಿಚರ್ಡ್‌ ಡಿ ವಿಲಿಯರ್ಸ್ ಇಬ್ಬರು ಗಂಡು ಮಕ್ಕಳಿಗೆ ತಂದೆಯಾಗಿದ್ದರು.

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದಶಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್‌ಗೆ ತಮಗೆ ಮೂರನೇ ಮಗುವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಪತ್ನಿ ಹಾಗೂ ಹೊಸದಾಗಿ ಜನಿಸಿರುವ ಮಗಳಿನೊಂದಿಗಿನ ಫೋಟೊವನ್ನು ಎಬಿ ಡಿವಿಲಿಯರ್ಸ್ ಪೋಸ್ಟ್‌ ಮಾಡಿದ್ದಾರೆ. ಮಗಳಿಗೆ ಇಟ್ಟಿರುವ 'ಯೆಂಟೆ ಡಿ ಡಿವಿಲಿಯರ್ಸ್' ಎಂಬ ಹೆಸರನ್ನು ಅವರು ಬಹಿರಂಗ ಪಡಿಸಿದರು.

"11-11-2020 ರಂದು ನಾವು ಮೂರನೇ ಮಗುವನ್ನು ಪ್ರಪಂಚಕ್ಕೆ ಸ್ವಾಗತಿಸಿದ್ದೆವು" ಎಂಬ ಶೀರ್ಷಿಕೆಯನ್ನು ನೀಡಿರುವ ಡಿವಿಲಿಯರ್ಸ್, "ಯೆಂಟೆ ಡಿವಿಲಿಯರ್ಸ್, ನೀವು ನಮ್ಮ ಕುಟುಂಬಕ್ಕೆ ಪರಿಪೂರ್ಣ ಸೇರ್ಪಡೆ ಮತ್ತು ಆಶೀರ್ವಾದ. ನಿಮಗಾಗಿ ಲೆಕ್ಕಕ್ಕಿಂತ ಮೀರಿ ನಾವು ಕೃತಜ್ಞರಾಗಿರುತ್ತೇವೆ!' ಎಂದು ಎರಡನೇ ಸಾಲಿನಲ್ಲಿ ತನ್ನ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp