2022ರಲ್ಲಿ ನಡೆಯಬೇಕಾಗಿದ್ದ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿ ಮುಂದೂಡಿಕೆ

 2022ರಲ್ಲಿ ನಡೆಯಬೇಕಾಗಿದ್ದ ದಕ್ಷಿಣ ಆಫ್ರಿಕಾ ಆವೃತ್ತಿಯ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯನ್ನು  ಮೂರು ತಿಂಗಳ ಕಾಲ ಮುಂದೂಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದುಬೈ: 2022ರಲ್ಲಿ ನಡೆಯಬೇಕಾಗಿದ್ದ ದಕ್ಷಿಣ ಆಫ್ರಿಕಾ ಆವೃತ್ತಿಯ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯನ್ನು  ಮೂರು ತಿಂಗಳ ಕಾಲ ಮುಂದೂಡಲಾಗಿದೆ.

2022ರ ನವೆಂಬರ್ ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಫೆಬ್ರವರಿ 2023ರಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಗುರುವಾರ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಕಾರಣ ನ್ಯೂಜಿಲೆಂಡ್ ನಲ್ಲಿ 2021ರಿಂದ 2022ರವರೆಗೆ ನಿಗದಿಯಾಗಿದ್ದ 50 ಓವರ್ ಗಳ ಮಹಿಳಾ ವಿಶ್ವ ಕಪ್ ಟೂರ್ನಿಯನ್ನು ಐಸಿಸಿ ಈ ವರ್ಷದ ಆಗಸ್ಟ್  ತಿಂಗಳಲ್ಲಿ ಮುಂದೂಡಿತ್ತು. 

ನವೆಂಬರ್ ನಲ್ಲಿ ನಡೆಯಬೇಕಾಗಿದ್ದ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2023ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

 2022ರ ಜುಲೈನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನೊಂದಿಗೆ ಮೂರು ಪ್ರಮುಖ ಕ್ರೀಡಾಕೂಟಗಳು ನಡೆಯಲಿದ್ದು, 2023ರಲ್ಲಿ ಯಾವುದೇ ಮಹಿಳಾ ಕ್ರೀಡಾಕೂಟಗಳನ್ನು ನಡೆಯದಿರುವುದರಿಂದ ಟಿ-20 ಮಹಿಳಾ ವಿಶ್ವ ಕಪ್ ಟೂರ್ನಿಗೆ ಆಟಗಾರರ ಸಿದ್ಧತೆಗೆ ಉತ್ತಮ ಬೆಂಬಲ ದೊರೆಯಲಿದೆ ಎಂದು ಐಸಿಸಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com