ವಿರಾಟ್ ಅವರಂತಹ ಆಟಗಾರರಿಂದಲೇ ಟೆಸ್ಟ್ ಕ್ರಿಕೆಟ್ ಜೀವಂತ: ಎಲ್ಲೆನ್ ಬಾರ್ಡರ್

ಭಾರತದ ನಾಯಕ ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರಿಂದ ಟೆಸ್ಟ್ ಕ್ರಿಕೆಟ್ ಇಂದು ಜೀವಂತವಾಗಿದೆ ಎಂದು ಆಸ್ಟ್ರೇಲಿಯಾದ ಮೊದಲ ವಿಶ್ವಕಪ್ ವಿಜೇತ ನಾಯಕ ಎಲ್ಲೆನ್ ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.

Published: 20th November 2020 08:23 PM  |   Last Updated: 20th November 2020 08:23 PM   |  A+A-


Kohli

ಕೊಹ್ಲಿ

Posted By : Vishwanath S
Source : UNI

ನವದೆಹಲಿ: ಭಾರತದ ನಾಯಕ ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರಿಂದ ಟೆಸ್ಟ್ ಕ್ರಿಕೆಟ್ ಇಂದು ಜೀವಂತವಾಗಿದೆ ಎಂದು ಆಸ್ಟ್ರೇಲಿಯಾದ ಮೊದಲ ವಿಶ್ವಕಪ್ ವಿಜೇತ ನಾಯಕ ಎಲ್ಲೆನ್ ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.

65 ವರ್ಷದ ಬಾರ್ಡರ್, ವಿರಾಟ್ ನಂತಹ ಕ್ರಿಕೆಟಿಗರಿಂದಾಗಿ ಟೆಸ್ಟ್ ಪಂದ್ಯದ ಉತ್ಸಾಹ ಉಳಿದಿದೆ ಎಂದು ನಂಬುತ್ತಾರೆ. ಭಾರತ ತಂಡವು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ, ಇಲ್ಲಿ ಭಾರತ ನವೆಂಬರ್ 27 ರಿಂದ 3 ಏಕದಿನ, 3 ಟಿ-20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ.

1987 ರಲ್ಲಿ ಭಾರತ ನೆಲದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ ಬಾರ್ಡರ್, "ವಿರಾಟ್ ಕ್ರಿಕೆಟ್ ಅನ್ನು ಬಹಳ ಉತ್ಸಾಹದಿಂದ ಆಡುತ್ತಾನೆ. ಈ ಪ್ರವಾಸದಲ್ಲಿ ವಿರಾಟ್ ಕೇವಲ ಒಂದು ಟೆಸ್ಟ್ ಮಾತ್ರ ಆಡುತ್ತಿರುವುದು ದೊಡ್ಡ ಸಮಾಧಾನವಾಗಿದೆ ಎಂದು ಅವರು ಹೇಳಿದರು. ನನ್ನ ಪ್ರಕಾರ ಇದು ಭಾರತಕ್ಕೆ ದೊಡ್ಡ ನಷ್ಟವಾಗಿದೆ. ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಅವನಿಗೆ ಸರಿದೂಗಿಸುವುದು ಕಷ್ಟ” ಎಂದಿದ್ದಾರೆ.

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp