ಮೊದಲ ಭೇಟಿ ಸಂದರ್ಭದಲ್ಲಿ ಧೋನಿ ಉದ್ದ ಕೂದಲು ಬಿಟ್ಟಿದ್ದಿದ್ದರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ: ಸಾಕ್ಷಿ ಸಿಂಗ್!

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು 2004ರಲ್ಲಿ. ಆಗ ಧೋನಿಯ ಹೇರ್ ಸ್ಟೈಲ್ ಯುವಕ-ಯುವತಿಯರ ಫೇವರಿಟ್ ಆಗಿತ್ತು, ಎಲ್ಲಿ ನೋಡಿದರೂ ಧೋನಿ ಹೇರ್ ಸ್ಟೈಲ್ ಬಗ್ಗೆಯೇ ಮಾತು.

Published: 20th November 2020 02:37 PM  |   Last Updated: 20th November 2020 04:07 PM   |  A+A-


Mahendra Singh Dhoni and Sakshi Singh

ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್

Posted By : Sumana Upadhyaya
Source : ANI

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು 2004ರಲ್ಲಿ. ಆಗ ಧೋನಿಯ ಹೇರ್ ಸ್ಟೈಲ್ ಯುವಕ-ಯುವತಿಯರ ಫೇವರಿಟ್ ಆಗಿತ್ತು, ಎಲ್ಲಿ ನೋಡಿದರೂ ಧೋನಿ ಹೇರ್ ಸ್ಟೈಲ್ ಬಗ್ಗೆಯೇ ಮಾತು.

ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಕೂಡ ಧೋನಿಯವರ ಕೂದಲಿಗೆ ಫಿದಾ ಆಗಿದ್ದರು. ಆದರೆ ಅವರ ಅಂದಿನ ಹೇರ್ ಸ್ಟೈಲ್ ಅವರ ಪತ್ನಿ ಸಾಕ್ಷಿ ಸಿಂಗ್ ಗೆ ಸುತಾರಾಂ ಇಷ್ಟವಾಗುತ್ತಿರಲಿಲ್ಲವಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಉದ್ದವಾದ ಕೂದಲು ಬಾಲಿವುಡ್ ನಟ ಜಾನ್ ಅಬ್ರಹಾಂ ಅಂತವರಿಗೆ ಹೆಚ್ಚು ಹೊಂದಿಕೆಯಾಗುತ್ತದೆಯೇ ಹೊರತು ತಮ್ಮ ಪತಿ ಮಹೇಂದ್ರ ಸಿಂಗ್ ಧೋನಿಗಲ್ಲ ಎಂದಿದ್ದಾರೆ.

ಅದೃಷ್ಟಕ್ಕೆ ನಾನು ಅವರನ್ನು ಭೇಟಿ ಮಾಡುವ ಹೊತ್ತಿಗೆ ಅವರಿಗೆ ಉದ್ದ ಕೂದಲು ಇರಲಿಲ್ಲ. ಅವರನ್ನು ಮೊದಲ ಸಲ ಭೇಟಿ ಮಾಡಿದ ಸಮಯದಲ್ಲಿ ಅವರಿಗೆ ಉದ್ದ ಕೂದಲು ಇರುತ್ತಿದ್ದರೆ ಪ್ರೀತಿಸುವುದು ಬಿಡಿ ಅವರತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ಎಂದು ಸಾಕ್ಷಿ ಸಿಂಗ್ ಹೇಳಿರುವ ವಿಡಿಯೊ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಪೋಸ್ಟ್ ಮಾಡಿದೆ.

Stay up to date on all the latest ಕ್ರಿಕೆಟ್ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp