ಆಸಿಸ್ ಪ್ರವಾಸದಲ್ಲಿರುವ ಕ್ರಿಕೆಟಿಗ ಮಹಮದ್ ಸಿರಾಜ್ ಗೆ ಪಿತೃವಿಯೋಗ

ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ 53 ವರ್ಷದ ಮೊಹಮ್ಮದ್ ಗೌಸ್ ಅವರು ಹೈದರಾಬಾದಿನಲ್ಲಿ ವಿಧಿವಶರಾಗಿದ್ದಾರೆ.

Published: 21st November 2020 12:58 AM  |   Last Updated: 21st November 2020 12:58 AM   |  A+A-


Mohammed Siraj

ಮಹಮದ್ ಸಿರಾಜ್ ಮತ್ತು ತಂದೆ ಗೌಸ್

Posted By : Srinivasamurthy VN
Source : PTI

ನವದೆಹಲಿ: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ 53 ವರ್ಷದ ಮೊಹಮ್ಮದ್ ಗೌಸ್ ಅವರು ಹೈದರಾಬಾದಿನಲ್ಲಿ ವಿಧಿವಶರಾಗಿದ್ದಾರೆ.

ಮೂಲಗಳ ಪ್ರಕಾರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೊಹಮ್ಮದ್ ಗೌಸ್ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತಂದೆಯ ಅಂತ್ಯಕ್ರಿಯೆಗೂ ಬಾರದ ಸ್ಥಿತಿಯಲ್ಲಿ ಇದ್ದಾರೆ.  ಕ್ವಾರಂಟೈನ್ ನಿಯಮದ ಪ್ರಕಾರ ಸಿರಾಜ್ ಆಸ್ಟ್ರೇಲಿಯಾದಿಂದ ಬರಲು ಸಾಧ್ಯವಾಗುತ್ತಿಲ್ಲ.

ಈ ವಿಚಾರವಾಗಿ ಕ್ರೀಡಾವಾಹಿನಿಯ ಜೊತೆ ಮಾತನಾಡಿರುವ ಸಿರಾಜ್, ಸಿಡ್ನಿಯಲ್ಲಿ ಅಭ್ಯಾಸ ಮುಗಿಸಿ ಬಂದ ನನಗೆ ತಂದೆಯ ವಿಚಾರವನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯವರು ತಿಳಿಸಿದರು. ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು, ನನ್ನ ಮಗ ನನ್ನ ದೇಶವನ್ನು ಹೆಮ್ಮೆ ಪಡುವಂತೆ  ಮಾಡುತ್ತಾನೆ ಎಂದು ಅವರಿಗಾಗಿ ನಾನು ಖಂಡಿತವಾಗಿಯೂ ಅದನ್ನು ಮಾಡಿಯೇ ಮಾಡುತ್ತೇನೆ. ನನಗಾಗಿ ಮತ್ತು ನನ್ನ ಕನಸಿಗಾಗಿ ನನ್ನಪ್ಪ ಆಟೋ ಓಡಿಸಿಕೊಂಡು ಬಹಳ ಕಷ್ಟಪಟ್ಟಿದ್ದಾರೆ. ನಾನು ನನ್ನ ಜೀವನದ ಪ್ರಮುಖ ಬೆಂಬಲವೊಂದನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡಬೇಕು ಎಂದು ಅವರು  ಕನಸು ಕಂಡಿದ್ದರು. ಎಲ್ಲೋ ಒಂದು ಕಡೆ ಅವರ ಕನಸ್ಸನ್ನು ನನಸು ಮಾಡಿದ್ದೇನೆ ಎಂಬ ಸಂತೋಷವಿದೆ. ಕೊಹ್ಲಿಯವರು ಮತ್ತು ರವಿಶಾಸ್ತ್ರಿಯವರು ಬಂದು ವಿಷಯ ಹೇಳಿದಾಗ ಶಾಕ್ ಆಯ್ತು ಎಂದು ಹೇಳಿಕೊಂಡಿದ್ದಾರೆ.

ಇನ್ನು ಸಿರಾಜ್ ಅವರ ತಂದೆ ಸಾವಿನ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, 'ಮೊಹಮ್ಮದ್ ಸಿರಾಜ್ ಮತ್ತು ಅವರ ಕುಟುಂಬಕ್ಕೆ ಅವರ ತಂದೆಯ ಸಾವಿನ ಕುರಿತು ಸಂತಾಪ ಸೂಚಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಇಡೀ ಆರ್‌ಸಿಬಿ ಕುಟುಂಬ ನಿಮ್ಮೊಂದಿಗಿದೆ. ಸಿರಾಜ್ ಮಾಯಾನ್ ದೃಢವಾಗಿರಿ ಎಂದು ಟ್ಲೀಟ್  ಮಾಡಿದೆ.

ಅಕ್ಟೋಬರ್ 21ರಂದು ಕೋಲ್ಕತ್ತಾ ವಿರುದ್ಧ ಸಿರಾಜ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ ಎಂಟು ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಅಂದೇ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಮ್ಯಾಚ್ ಮುಗಿಸಿ ಮನೆಗೆ ಕಾಲ್ ಮಾಡಿದಾಗ ತಂದೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಆಗ ನಾನು ಇಂದು  ಎರಡು ಗುಡ್ ನ್ಯೂಸ್, ಮ್ಯಾಚ್ ಗೆದ್ದಿದ್ದೇವೆ ಜೊತೆಗೆ ಅಪ್ಪ ವಾಪಸ್ ಮನೆಗೆ ಬಂದಿದ್ದಾರೆ ಎಂದು ಖುಷಿಪಟ್ಟಿದೆ ಎಂದು ಸಿರಾಜ್ ತಿಳಿಸಿದ್ದರು. 

Stay up to date on all the latest ಕ್ರಿಕೆಟ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp