ಭಾರತದ ಟಾಂಗ್ ಗಳಿಗೆ ಪ್ರತಿಕ್ರಿಯಿಸುವುದಿಲ್ಲ: ಡೇವಿಡ್ ವಾರ್ನರ್

ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಭಾರತ ವಿರುದ್ಧದ ಮುಂಬರುವ ಸರಣಿಯ ಸಮಯದಲ್ಲಿ ತಮ್ಮ ಕೋಪವನ್ನು ನಿಯಂತ್ರಿಸುವುದಾಗಿ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ.
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್

ಮೆಲ್ಬೋರ್ನ್: ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಭಾರತ ವಿರುದ್ಧದ ಮುಂಬರುವ ಸರಣಿಯ ಸಮಯದಲ್ಲಿ ತಮ್ಮ ಕೋಪವನ್ನು ನಿಯಂತ್ರಿಸುವುದಾಗಿ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ.

ವಿರಾಟ್ ಕೊಹ್ಲಿಯ ಹುಡುಗರು ತಮ್ಮನ್ನು ಕೆಣಕುವ ಹೇಳಿಕೆಗಳನ್ನು ನೀಡುವ ಸಾಧ್ಯತೆ ಇದ್ದು, ಅಂತಹ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಈ ಬಾರಿ ವಿಭಿನ್ನ ವಿಧಾನವನ್ನು ಅನುಸರಿಸಬಹುದು ಮತ್ತು ಈ ಮೂಲಕ ಭಾರತದ ಕೆಣಕುವ ಹೇಳಿಕೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ಕಳೆದ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ಅನೇಕ ಆಟಗಾರರ ನಡುವೆ ಸಾಕಷ್ಟು ಜಗಳ ನಡೆದಿತ್ತು. ಇದರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ನಡುವೆ ಸಾಕಷ್ಟು ಮಾತಿನ ಚಕಮಕಿ ಕೇಳಿ ಬಂದಿತ್ತು. ಭಾರತವು ಟೆಸ್ಟ್ ಸರಣಿಯನ್ನು 2–1ರಿಂದ ಗೆದ್ದುಕೊಂಡಿತು.

ಇದೇ ವೇಳೆ ಆಸ್ಟ್ರೇಲಿಯಾ ಪರ ಆಡುವವರೆಗೂ ದೇಶದ ಪ್ರಸಿದ್ಧ ಬಿಗ್ ಬ್ಯಾಷ್ ಲೀಗ್(ಬಿಬಿಎಲ್)ಗೆ ಹಿಂದಿರುಗುವುದಿಲ್ಲ ಎಂದು ಆಸ್ಟ್ರೇಲಿಯಾದ ಆಟಗಾರ ಹೇಳಿದ್ದಾರೆ.

ಆಟದ ನಿಯಮಗಳನ್ನು ಅನಗತ್ಯವಾಗಿ ಹಾಳುಮಾಡುವ ಬದಲು, ಆಟದಲ್ಲಿ ಸ್ಟಾರ್ ಆಟಗಾರರ ಉಪಸ್ಥಿತಿಯ ಅಗತ್ಯವಿದೆ ಎಂದು ವಾರ್ನರ್ ಹೇಳಿದರು.

ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿದ್ದ ವಾರ್ನರ್ ಬಿಬಿಎಲ್‌ನ ಆರಂಭಿಕ ಋತುಗಳಲ್ಲಿ ಲೀಗ್‌ನ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರು ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com