ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನದ ಆರು ಆಟಗಾರರಿಗೆ ಕೋವಿಡ್-19 ಪಾಸಿಟಿವ್
ಡಿಸೆಂಬರ್ 18 ರಿಂದ ಆಕ್ಲಂಡ್ ನಲ್ಲಿ ಆರಂಭವಾಗಲಿರುವ ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗಾಗಿ ತೆರಳಿರುವ ಪಾಕಿಸ್ತಾನದ ಆರು ಮಂದಿ ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
Published: 26th November 2020 12:04 PM | Last Updated: 26th November 2020 12:49 PM | A+A A-

ಪಾಕಿಸ್ತಾನದ ಆಟಗಾರರು
ಕ್ರಿಸ್ಟ್ ಚರ್ಚ್: ಡಿಸೆಂಬರ್ 18 ರಿಂದ ಆಕ್ಲಂಡ್ ನಲ್ಲಿ ಆರಂಭವಾಗಲಿರುವ ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗಾಗಿ ತೆರಳಿರುವ ಪಾಕಿಸ್ತಾನದ ಆರು ಮಂದಿ ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ನ್ಯೂಜಿಲೆಂಡ್ ಕ್ರಿಕೆಟ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ಜೈವಿಕ ಸುರಕ್ಷಿತ ಶಿಷ್ಟಾಚಾರವನ್ನು ಪಾಕ್ ಆಟಗಾರರು ಉಲ್ಲಂಘಿಸಿದ್ದು, ಕ್ವಾರಂಟೈನ್ ನಲ್ಲಿ ತರಬೇತಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಬಾಬರ್ ಅಜಾಂ ನೇತೃತ್ವದ ಪಾಕ್ ತಂಡ ಮಂಗಳವಾರ ನ್ಯೂಜಿಲೆಂಡ್ ಗೆ ಆಗಮಿಸಿದ್ದು, ಕೋವಿಡ್-19 ಶಿಷ್ಟಾಚಾರದ ಪ್ರಕಾರ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.
ಕೊರೋನಾವೈರಸ್ ತಗುಲಿರುವ ಆಟಗಾರರ ಹೆಸರನ್ನು ಬಹಿರಂಗಪಡಿಸದ ನ್ಯೂಜಿಲೆಂಡ್ ಕ್ರಿಕೆಟ್, ಎಲ್ಲಾ ಆರು ಆಟಗಾರರನ್ನು ಐಸೋಲೇಷನ್ ನಲ್ಲಿ ಇಡಲಾಗುವುದು, ಈ ಸಂಬಂಧ ಪಾಕಿಸ್ತಾನದ ಆಟಗಾರರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದೆ.