ಟೀಂ ಇಂಡಿಯಾ-ಆಸ್ಟ್ರೇಲಿಯಾ ತಂಡಗಳ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟ್ಸ್‌ಮನ್‌ಗಳು

ಕ್ರಿಕೆಟ್‌ ಜಗತ್ತಿನ ಕಣ್ಣು ಈಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಯತ್ತ ನೆಲೆಸಿದೆ. ಇತ್ತಂಡಗಳು ನವೆಂಬರ್‌ 27ರಿಂದ ಮೂರು ಪಂದ್ಯಗಳ ಹೈ ವೋಲ್ಟೇಜ್‌ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ.
ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ ಆಟಗಾರರು

ನವದೆಹಲಿ: ಕ್ರಿಕೆಟ್‌ ಜಗತ್ತಿನ ಕಣ್ಣು ಈಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಯತ್ತ ನೆಲೆಸಿದೆ. ಇತ್ತಂಡಗಳು ನವೆಂಬರ್‌ 27ರಿಂದ ಮೂರು ಪಂದ್ಯಗಳ ಹೈ ವೋಲ್ಟೇಜ್‌ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ.

ಸರಣಿಯ ಮೊದಲ ಎರಡು ಪಂದ್ಯಗಳು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌(ಎಸ್‌ಸಿಜಿ) ಕ್ರೀಡಾಂಗಣದಲ್ಲಿ ಬಯೋ ಸೆಕ್ಯೂರ್‌ ವಾತಾವರಣದ ಅಡಿಯಲ್ಲಿ ಆಯೋಜನೆಯಾಗಲಿದೆ. ಬಳಿಕ ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದ ಮನುಕಾ ಓವಲ್‌ ಆತಿಥ್ಯ ವಹಿಸಲಿದೆ.

ಇತ್ತಂಡಗಳ ಬ್ಯಾಟಿಂಗ್‌ ಬಲಿಷ್ಠವಾಗಿದ್ದು ಅಭಿಮಾನಿಗಳಿಗೆ ರನ್‌ ಹೊಳೆ ಕಾಣಲು ಸಿಗುವುದು ಬಹುತೇಕ ಖಾತ್ರಿಯಾದಂತ್ತಿದೆ. ಇತ್ತಂಡಗಳ ನಡುವಣ ಒಡಿಐ ಕದನದ ಇತಿಹಾಸ ಕೆದಕಿದರೆ ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ಕಾಣಬಹುದಾಗಿದೆ. ಸಚಿನ್‌ ತೆಂಡೂಲ್ಕರ್‌ ಮತ್ತು ರಿಕಿ ಪಾಂಟಿಂಗ್‌ ತಮ್ಮ ತಮ್ಮ ತಂಡಗಳ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಅಂದಹಾಗೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಒಬ್ಬರೇ ಇಂಡೊ-ಆಸೀಸ್‌ ಏಕದಿನ ಕ್ರಿಕೆಟ್ ಕದನದಲ್ಲಿ 3000ಕ್ಕೂ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಇದರಲ್ಲಿ ದಾಖಲೆಯ 9 ಶತಕಗಳು ಕೂಡ ಸೇರಿವೆ ಎಂಬುದು ವಿಶೇಷ. ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ 3ನೇ ಸ್ಥಾನಕ್ಕೆ ಜಾರಿದ್ದರೂ, ಆಸೀಸ್‌ ಪರ ಗರಿಷ್ಟ ಸ್ಕೋರರ್ ಆಗಿ ಉಳಿದಿದ್ದಾರೆ.

ರೋಹಿತ್‌ ಶರ್ಮಾ, ಭಾರತದ ಪರ ಆಸ್ಟ್ರೇಲಿಯಾ ಎದುರು ಎರಡನೇ ಅತ್ಯಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆದರೆ, ಗಾಯದ ಸಮಸ್ಯೆ ಕಾರಣ ಅವರು ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದಿರುವ ಕಾರಣ ಏಕದಿನ ಮತ್ತು ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಟೆಸ್ಟ್‌ ಸರಣಿಯಲ್ಲಿ ಆಡುವುದು ಕೂಡ ಅನುಮಾನವಾಗಿದೆ. ಆಸ್ಟ್ರೇಲಿಯಾ ಎದುರು ತಲಾ 8 ಶತಕ ಮತ್ತು ಅರ್ಧಶತಕಗಳನ್ನು ಬಾರಿಸಿದ ಹೆಗ್ಗಳಿಕೆ ಹಿಟ್‌ಮ್ಯಾನ್‌ ಖ್ಯಾತಿಯ ಸ್ಫೋಟ ಆರಂಭಿಕ ಬ್ಯಾಟ್ಸ್‌ಮನ್‌ನದ್ದು. ಅಂದಹಾಗೆ ರೋಹಿತ್‌ 2012ರಲ್ಲಿ ಆಸ್ಟ್ರೇಲಿಯಾ ಎದುರು ಒಡಿಐ ದ್ವಿಶತಕವನ್ನೂ ಬಾರಿಸಿದ್ದರು.

ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟ್ಸ್‌ಮನ್‌ಗಳ ವಿವರ ಹೀಗಿದೆ.

* ಸಚಿನ್‌ ತೆಂಡೂಲ್ಕರ್‌
71 ಪಂದ್ಯಗಳ ಪೈಕಿ ಸಚಿನ್ ತೆಂಡೂಲ್ಕರ್ ಅವರು 3077 ರನ್ ಬಾರಿಸಿದ್ದಾರೆ. 

* ರೋಹಿತ್‌ ಶರ್ಮಾ
40 ಪಂದ್ಯಗಳ ಪೈಕಿ ರೋಹಿತ್ ಶರ್ಮಾ ಅವರು 2208 ರನ್ ಪೇರಿಸಿದ್ದಾರೆ.
 
* ರಿಕಿ ಪಾಂಟಿಂಗ್
59 ಏಕದಿನ ಪಂದ್ಯಗಳ ಪೈಕಿ ರಿಕಿ ಪಾಂಟಿಂಗ್ 2164 ರನ್ ಬಾರಿಸಿದ್ದಾರೆ.  

* ವಿರಾಟ್ ಕೊಹ್ಲಿ
40 ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ 1910 ರನ್ ಪೇರಿಸಿದ್ದಾರೆ. 

* ಎಂಎಸ್‌ ಧೋನಿ
55 ಪಂದ್ಯಗಳ ಪೈಕಿ ಎಂಎಸ್ ಧೋನಿ 1660 ರನ್ ಸಿಡಿಸಿದ್ದಾರೆ.

ಏಕದಿನ ಕ್ರಿಕೆಟ್ ಸರಣಿ
ಮೊದಲನೇ ಪಂದ್ಯ: ನ.27 (ಸ್ಥಳ: ಎಸ್‌ಸಿಜಿ)
ಎರಡನೇ ಪಂದ್ಯ: ನ.29 (ಸ್ಥಳ: ಎಸ್‌ಸಿಜಿ)
ಮೂರನೇ ಪಂದ್ಯ: ಡಿ.2 (ಮನುಕಾ ಓವಲ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com