ಏಕದಿನ ಕ್ರಿಕೆಟ್ ನಲ್ಲಿ ಆ್ಯರಾನ್ ಫಿಂಚ್ 5000 ರನ್ ಸಾಧನೆ, ಗಂಗೂಲಿ ದಾಖಲೆ ಸರಿಗಟ್ಟಿದ ಆಸಿಸ್ ನಾಯಕ

ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ಶುಕ್ರವಾರ ಆರಂಭವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಆಡಿದ ಆರಂಭಿಕ ಏರಾನ್ ಫಿಂಚ್ ಶತಕದ ಸಾಧನೆ ಮಾಡಿದ್ದಾರೆ.
ಆ್ಯರಾನ್ ಫಿಂಚ್
ಆ್ಯರಾನ್ ಫಿಂಚ್

ಸಿಡ್ನಿ: ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ಶುಕ್ರವಾರ ಆರಂಭವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಆಡಿದ ಆರಂಭಿಕ ಏರಾನ್ ಫಿಂಚ್ ಶತಕದ ಸಾಧನೆ ಮಾಡಿದ್ದಾರೆ.

ಆಸೀಸ್ ತಂಡದ ಅನುಭವಿ ಬ್ಯಾಟ್ಸ್ ಮನ್ ಫಿಂಚ್, ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ನೈಜ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು. ಇವರು ಏಕದಿನ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಮೂರಂಕಿ ಮುಟ್ಟಿ ಸಂಭ್ರಮಿಸಿದರು. 117 ಎಸೆತಗಳಲ್ಲಿ ಫಿಂಚ್ 101 ರನ್ ಸಿಡಿಸಿ  ಅಜೇಯರಾಗುಳಿದರು. ಏಕದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ಪರ ಐದು ಸಾವಿರ ರನ್ ಗಳನ್ನು ಕಲೆ ಹಾಕಿದ ಹಿರಿಮೆ ತಮ್ಮದಾಗಿಸಿಕೊಂಡರು.

ಆ್ಯರಾನ್ ಫಿಂಚ್ ಅವರು ಇನ್ನಿಂಗ್ಸ್ ಆರನೇ ಓವರ್ ನಲ್ಲಿ ಈ ಸಾಧನೆ ಮಾಡಿದರು. ಬುಮ್ರಾ ಅವರು ಎಸೆದ ಈ ಓವರ್ ನ ಐದನೇ ಎಸೆತದಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ವೇಗವಾಗಿ ಐದು ಸಾವಿರ ರನ್ ಕಲೆ ಹಾಕಿದ ಆಸ್ಟ್ರೇಲಿಯಾದ ಎರಡನೇ ಆಟಗಾರ ಎಂಬ ಹಿರಿಮೆ  ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾ ಪರ ವೇಗವಾಗಿ ಐದು ಸಾವಿರ ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ 115 ಇನ್ನಿಂಗ್ಸ್ ಈ ಸಾಧನೆ ಮಾಡಿದ್ದು, ಅಗ್ರ ಸ್ಥಾನದಲ್ಲಿದ್ದಾರೆ.

ಸೌರವ್‌ ಗಂಗೂಲಿ ದಾಖಲೆಯನ್ನು ಸರಿಗಟ್ಟಿದ ಆರೋನ್‌ ಫಿಂಚ್‌
ಒಟ್ಟಾರೆ ಆರೋನ್‌ ಫಿಂಚ್‌ 126 ಓಡಿಐ(130 ಪಂದ್ಯಗಳು) ಇನಿಂಗ್ಸ್‌ಗಳಿಂದ 5000 ರನ್‌ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ ಆದರು. 115 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಡೇವಿಡ್‌  ವಾರ್ನರ್‌ ಅಗ್ರ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಡೀನ್‌ ಜೋನ್ಸ್ (128 ಇನಿಂಗ್ಸ್‌ಗಳು) ಇದ್ದಾರೆ. ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ದಾಖಲೆಯನ್ನು ಫಿಂಚ್‌ ಸರಿಗಟ್ಟಿದ್ದಾರೆ. ಸೌರವ್‌ ಗಂಗೂಲಿ ಕೂಡ 126 ಏಕದಿನ  ಇನಿಂಗ್ಸ್‌ಗಳಲ್ಲಿ 5000 ರನ್‌ಗಳನ್ನು ಪೂರೈಸಿದ್ದರು. ಗಂಗೂಲಿ ಹಾಗೂ ಫಿಂಚ್‌ 13ನೇ ಜಂಟಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅಲ್ಲದೆ, ಓಡಿಐ ಕ್ರಿಕೆಟ್‌ನಲ್ಲಿ 5000 ರನ್‌ಗಳನ್ನು ಗಳಿಸಿರುವ ಆಸ್ಟ್ರೇಲಿಯಾದ 16ನೇ ಆಟಗಾರ ಹಾಗೂ 10ನೇ ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಜತಗೆ, ಆರಂಭಿಕ ಬ್ಯಾಟ್ಸ್‌ಮನ್‌ ಆಗಿಯೂ ಆರೋನ್‌ ಪಿಂಚ್‌ 5000 ರನ್‌ಗಳನ್ನು ಪೂರೈಸಿ ಮತ್ತೊಂದು ದಾಖಲೆಗೂ ಭಾಜನರಾದರು.  ಆರಂಭಿಕನಾಗಿ ಫಿಂಚ್‌ 5000 ರನ್‌ಗಳನ್ನು ಪೂರೈಸಲು 24 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಓಪನರ್‌ ಆಗಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಐದನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com