ಆಸ್ಟ್ರೇಲಿಯಾ ಪ್ರವಾಸ: ಮೊದಲ ಏಕದಿನ ಪಂದ್ಯದ ವೇಳೆ ನವದೀಪ್ ಸೈನಿ ಕ್ಷಮೆ ಯಾಚಿಸಿದ ಆ್ಯಡಂ ಗಿಲ್‌ಕ್ರಿಸ್ಟ್
ಸಿಡ್ನಿ ಮೈದಾನದಲ್ಲಿಂದು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಮೊದಲ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದ ಅಸ್ಟ್ರೇಲಿಯಾದ ಮಾಜಿ ನಾಯಕ ಆ್ಯಡಂ ಗಿಲ್‌ಕ್ರಿಸ್ಟ್ ತಾವು ಮಾಡಿದ ಪ್ರಮಾದಕ್ಕಾಗಿ ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ.
Published: 27th November 2020 04:07 PM | Last Updated: 27th November 2020 04:40 PM | A+A A-

ಆ್ಯಡಂ ಗಿಲ್ ಕ್ರಿಸ್ಟ್-ಸೈನಿ
ಸಿಡ್ನಿ: ಸಿಡ್ನಿ ಮೈದಾನದಲ್ಲಿಂದು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಮೊದಲ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದ ಅಸ್ಟ್ರೇಲಿಯಾದ ಮಾಜಿ ನಾಯಕ ಆ್ಯಡಂ ಗಿಲ್‌ಕ್ರಿಸ್ಟ್ ತಾವು ಮಾಡಿದ ಪ್ರಮಾದಕ್ಕಾಗಿ ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ.
ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದು, ಭಾರತದ ವೇಗಿ ನವದೀಪ್ ಸೈನಿ ಬೌಲಿಂಗ್ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಶೇನ್ ವಾರ್ನ್ ಮತ್ತು ಆ್ಯಡಮ್ ಗಿಲ್‌ಕ್ರಿಸ್ಟ್ ಸೈನಿ ಬಗ್ಗೆ ಮಾತನಾಡಿದರು. ತನ್ನ ತಂದೆ ಸಾವನ್ನಪ್ಪಿದರೂ ದೇಶಕ್ಕಾಗಿ ಆಸ್ಟ್ರೇಲಿಯಾ ಸರಣಿ ಆಡಲುದ್ದೇಶಿಸಿದ್ದಾಗಿ ಸೈನಿಯನ್ನು ಇಬ್ಬರೂ ಶ್ಲಾಘಿಸಿದರು.
ಆದರೆ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿದ್ದು ನವ್ ದೀಪ್ ಸೈನಿ ಅಲ್ಲ, ಮೊಹಮ್ಮದ್ ಸಿರಾಜ್. ಸಿರಾಜ್ ಹೆಸರು ಹೇಳಲು ಬದಲು ತಪ್ಪಾಗಿ ನವದೀಪ್ ಸೈನಿ ಅಂತಾ ಹೇಳಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗಿಲ್ ಕ್ರಿಸ್ಟ್ ಸೈನಿ ಬಳಿ ಕ್ಷಣೆಯಾಚಿಸಿದ್ದರು.
ಕೊರೋನಾ ಮಹಾಮಾರಿ ನಡುವೆ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯೊಂದನ್ನು ಆಡುತ್ತಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾಗೆ 375 ರನ್ ಗುರಿ ನೀಡಿದೆ.