ನಿಧಾನಗತಿಯ ಬೌಲಿಂಗ್: ಭಾರತ ತಂಡಕ್ಕೆ ಶೇ. 20ರಷ್ಟು ದಂಡ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಭಾರತ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಿದೆ.
ಆರೋನ್ ಫಿಂಚ್-ವಿರಾಟ್ ಕೊಹ್ಲಿ
ಆರೋನ್ ಫಿಂಚ್-ವಿರಾಟ್ ಕೊಹ್ಲಿ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಭಾರತ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಿದೆ.

ಸಿಡ್ನಿಯಲ್ಲಿ ಶುಕ್ರವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯಿತು. ಅಲ್ಲಿ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾವನ್ನು 66 ರನ್‌ಗಳಿಂದ ಸೋಲಿಸಿತು. ನಿಗದಿತ ಸಮಯದಲ್ಲಿ ಭಾರತ ತಂಡವು ಓವರ್ ಮುಗಿಸದ ಹಿನ್ನೆಲೆ ಪಂದ್ಯದ ರೆಫರಿ ಡೇವಿಡ್ ಬೂನ್ ತಂಡಕ್ಕೆ ದಂಡ ವಿಧಿಸಿದ್ದಾರೆ.

ಆನ್-ಫೀಲ್ಡ್ ಅಂಪೈರ್‌ಗಳು ರಾಡ್ ಟಕರ್ ಮತ್ತು ಸ್ಯಾಮ್ ನೊಗಾಜ್ಸ್ಕಿ, ಟಿವಿ ಅಂಪೈರ್ ಪಾಲ್ ರೀಫೆಲ್ ಮತ್ತು ನಾಲ್ಕನೇ ಅಂಪೈರ್ ಗೆರಾರ್ಡ್ ಅಬೂದ್ ಟೀಮ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ಆದಾಗ್ಯೂ, ಕ್ಯಾಪ್ಟನ್ ವಿರಾಟ್ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ ಪ್ರಕರಣದಲ್ಲಿ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ.
ಐಸಿಸಿ ನೀತಿ ಸಂಹಿತೆಯ ಸೆಕ್ಷನ್ 2.22ರ ಪ್ರಕಾರ, ಆಟಗಾರರಿಗೆ ನಿಗದಿತ ಸಮಯದಲ್ಲಿ ಬೌಲ್ ಮಾಡದಿದ್ದರೆ ಪ್ರತಿ ಓವರ್‌ಗೆ 20 ಶೇಕಡಾ ದಂಡ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com