ಆಸ್ಟ್ರೇಲಿಯಾ ಪರ ಭರ್ಜರಿ ಬ್ಯಾಟಿಂಗ್: ಕೆಎಲ್ ರಾಹುಲ್ ಬಳಿ ಕ್ಷಮೆಯಾಚಿಸಿದ ಮ್ಯಾಕ್ಸ್ ವೆಲ್!

ಕಳೆದ ಐಪಿಎಲ್ ನಲ್ಲಿ ಮಿಂಚಿದ್ದ ಕೆಲ ಆಟಗಾರ ದೇಶದ ಪರವಾಗಿ ಆಡುವಲ್ಲಿ ವಿಫಲರಾಗಿದ್ದರು. ಇನ್ನೂ ಕೆಲವರು ಭರ್ಜರಿ ಆಟ ಪ್ರದರ್ಶಿಸಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

Published: 28th November 2020 06:58 PM  |   Last Updated: 28th November 2020 06:58 PM   |  A+A-


KL Rahul

ಕೆಎಲ್ ರಾಹುಲ್

Posted By : Vishwanath S
Source : Online Desk

ಸಿಡ್ನಿ: ಕಳೆದ ಐಪಿಎಲ್ ನಲ್ಲಿ ಮಿಂಚಿದ್ದ ಕೆಲ ಆಟಗಾರ ದೇಶದ ಪರವಾಗಿ ಆಡುವಲ್ಲಿ ವಿಫಲರಾಗಿದ್ದರು. ಇನ್ನೂ ಕೆಲವರು ಭರ್ಜರಿ ಆಟ ಪ್ರದರ್ಶಿಸಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. 

ಇದರಲ್ಲಿ ಹೆಚ್ಚಾಗಿ ಟೀಕೆಗೆ ಒಳಗಾದವರು ಪಂಜಾಬ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್. ಹೌದು ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಅವರು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದರು. ಇನ್ನು ಐಪಿಎಲ್ ನಲ್ಲಿ ಪಂಜಾಬ್ ಪರ ಆಡಿದ್ದ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾ ಪರ ಉತ್ತಮ ಆಟವಾಡಿದ್ದು ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. 

ಹೀಗಾಗಿ ಕೆಲ ಟ್ವೀಟರಿಗರು ಜೇಮ್ಸ್ ನೀಶಮ್ ಗೆ ಟ್ಯಾಗ್ ಮಾಡಿ, ನಿಮ್ಮ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ನೋಡಿ ರಾಹುಲ್ ಪರಿಸ್ಥಿತಿ ಹೀಗಾಗಿದೆ ಎಂದು ಬರೆದು ಫೋಟೋವೊಂದನ್ನು ಟ್ವೀಟ್ ಮಾಡಿದ್ದರು. 

ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್, ಟೀಂ ಇಂಡಿಯಾ ವಿರುದ್ಧದ ಬ್ಯಾಟಿಂಗ್ ವೇಳೆ ನಾನು ಕೆಎಲ್ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ ಎಂದು ಬರೆದುಕೊಂಡಿದ್ದಾರೆ. 


Stay up to date on all the latest ಕ್ರಿಕೆಟ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp