ಟೆಸ್ಟ್‌ ಸರಣಿ: ಕೊಹ್ಲಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲವೆಂದ ಕ್ಲಾರ್ಕ್

ವಿರಾಟ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಆಟಗಾರ ಎಂದು ಕರೆದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ಅಡಿಲೇಡ್ ಟೆಸ್ಟ್ ಬಳಿಕ ಭಾರತ ತಂಡದ ನಾಯಕನ ನಿರ್ಗಮನ ಸೇರಿದಂತೆ ಹಲವಾರು ಕಾರಣಗಳಿಂದ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Published: 29th November 2020 11:14 PM  |   Last Updated: 29th November 2020 11:14 PM   |  A+A-


ViratKohli_Clarke1

ವಿರಾಟ್ ಕೊಹ್ಲಿ, ಮೈಕೆಲ್ ಕ್ಲಾರ್ಕ್

Posted By : Nagaraja AB
Source : UNI

ನವದೆಹಲಿ: ವಿರಾಟ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಆಟಗಾರ ಎಂದು ಕರೆದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ಅಡಿಲೇಡ್ ಟೆಸ್ಟ್ ಬಳಿಕ ಭಾರತ ತಂಡದ ನಾಯಕನ ನಿರ್ಗಮನ ಸೇರಿದಂತೆ ಹಲವಾರು ಕಾರಣಗಳಿಂದ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಜನವರಿ ಆರಂಭದಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣದಿಂದ ಟೀಮ್ ಇಂಡಿಯಾ ನಾಯಕ ಮೊದಲನೇ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮುಖ ಮಾಡಲಿದ್ದಾರೆ.ಆದ್ದರಿಂದ ಇನ್ನುಳಿದ ಮೂರು ಪಂದ್ಯಗಳಿಗೆ ಕೊಹ್ಲಿ ಅನುಪಸ್ಥಿತಿ ಭಾರತಕ್ಕೆ ಬಲವಾಗಿ ಕಾಡಲಿದೆ ಎಂಬುದು ಮೈಕಲ್ ಕ್ಲಾರ್ಕ್ ಅಭಿಪ್ರಾಯ.

ವಿಶ್ವದಲ್ಲಿಯೇ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ. ಯಾವುದೇ ಸಮಯದಲ್ಲಿ ಕೊಹ್ಲಿ ಆಡದೇ ಇದ್ದರೆ, ಅದು ಭಾರತ ತಂಡಕ್ಕೆ ದೊಡ್ಡ ನಷ್ಟ. ಇದರರ್ಥ ಭಾರತ ತಂಡ ಉತ್ತಮ ಆರಂಭವನ್ನು ಕಾಣಬೇಕು. ಏಕದಿನ ಹಾಗೂ ಟಿ-20 ಸರಣಿಗಳಲ್ಲಿ ಉತ್ತಮ ಆರಂಭ ಕಂಡಿದ್ದೇ ಆದಲ್ಲಿ , ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದೇ ಲಯವನ್ನು ಮುಂದುವರಿಸಬಹುದು, ಇಲ್ಲವಾದರೆ ಭಾರತಕ್ಕೆ ಕಠಿಣವಾಗಲಿದೆ ಎಂದು ಕ್ಲಾರ್ಕ್ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp