2 ನೇ ಒಡಿಐ: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 51 ರನ್ ಗಳ ಗೆಲುವು! 

ಸಿಡ್ನಿಯಲ್ಲಿ ನಡೆಯುತ್ತಿರುವ 2 ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 51 ರನ್ ಗಳ ಗೆಲುವು ದಾಖಲಿಸಿದ್ದು, ಸತತ ಎರಡು ಗೆಲುವಿನ ಮೂಲಕ ಸರಣಿಯಲ್ಲಿ ಆಸೀಸ್ 2-0 ಅಂತರದ ಗೆಲುವು ದಾಖಲಿಸಿದೆ.

Published: 29th November 2020 05:55 PM  |   Last Updated: 29th November 2020 05:55 PM   |  A+A-


India vs Australia, 2nd ODI: Smith's Ton Helps Australia Beat India By 51 Runs

2 ನೇ ಒಡಿಐ: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 51 ರನ್ ಗಳ ಗೆಲುವು!

Posted By : Srinivas Rao BV
Source : Online Desk

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ 2 ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 51 ರನ್ ಗಳ ಗೆಲುವು ದಾಖಲಿಸಿದ್ದು, ಸತತ ಎರಡು ಗೆಲುವಿನ ಮೂಲಕ ಸರಣಿಯಲ್ಲಿ ಆಸೀಸ್ 2-0 ಅಂತರದ ಗೆಲುವು ದಾಖಲಿಸಿದೆ.

ಆಸ್ಟ್ರೇಲಿಯಾ ನೀಡಿದ 390 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಪ್ರಾರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಕಂಡುಕೊಂಡಿತಾದರೂ 

ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಝಲ್ವುಡ್ ನ ಬೌಲಿಂಗ್ ದಾಳಿಗೆ ಶಿಖರ್ ಧವನ್ (30) ಮಯಾಂಕ್ ಅಗರ್ವಾಲ್ (28) ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. ಕೆಎಲ್ ರಾಹುಲ್-ಕೊಹ್ಲಿ(89) ಅವರ 93 ರನ್ ಗಳ ಅದ್ಭುತ ಜೊತೆಯಾಟ ಭಾರತದ ಗೆಲುವಿನ ಆಸೆಯನ್ನು ಚಿಗುರಿಸಿತ್ತು. ಆದರೆ ಈ ಜೊತೆಯಾಟವೂ ಸಹ ಹೆಚ್ಚು ಕಾಲ ಆಸೀಸ್ ಬೌಲಿಂಗ್ ನ್ನು ಎದುರಿಸಲು ವಿಫಲವಾಯಿತು.

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರ ಸತತ ಎರಡನೇ ಬಾರಿಗೂ ಸ್ಟಾರ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದು 64 ಎಸೆತಗಳಲ್ಲಿ 104 ರನ್ ಗಳನ್ನು ಗಳಿಸುವ ಮೂಲಕ ಬೃಹತ್ ರನ್ ಗಳಿಸಲು ತಂಡಕ್ಕೆ ನೆರವಾದರು. ಸ್ಮಿತ್ ಜೊತೆಗೆ ಡೇವಿಡ್ ವಾರ್ನರ್ (77 ಎಸೆತಗಳಲ್ಲಿ 83 ರನ್) ಗ್ಲೆನ್ ಮ್ಯಾಕ್ಸ್ವೆಲ್ (29 ಎಸೆತಗಳಲ್ಲಿ 63 ರನ್) ಗಳಿಸಿ ತಂಡಕ್ಕೆ ನೆರವಾದರು.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp