ಆಸ್ಟ್ರೇಲಿಯಾಗೆ ಗಾಯದ ಭೀತಿ: ಫೀಲ್ಡಿಂಗ್ ವೇಳೆ ಡೇವಿಡ್ ವಾರ್ನರ್ ಗೆ ಪೆಟ್ಟು, ಆಸ್ಪತ್ರೆಗೆ ರವಾನೆ

ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬೃಹತ್ ಪೇರಿಸಿರುವ ಆಸ್ಟ್ರೇಲಿಯಾಗೆ ಗಾಯದ ಭೀತಿ ಆರಂಭವಾಗಿದ್ದು, ಆರಂಭಿಕ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗಾಯದ ಸಮಸ್ಯೆಗೆ ತುತ್ತಾಗಿ ಪಂದ್ಯದ ನಡುವೆಯೇ ಆಸ್ಪತ್ರೆಗೆ ತೆರಳಿದ್ದಾರೆ.
ಗಾಯಗೊಂಡ ವಾರ್ನರ್
ಗಾಯಗೊಂಡ ವಾರ್ನರ್

ಸಿಡ್ನಿ: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬೃಹತ್ ಪೇರಿಸಿರುವ ಆಸ್ಟ್ರೇಲಿಯಾಗೆ ಗಾಯದ ಭೀತಿ ಆರಂಭವಾಗಿದ್ದು, ಆರಂಭಿಕ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗಾಯದ ಸಮಸ್ಯೆಗೆ ತುತ್ತಾಗಿ ಪಂದ್ಯದ ನಡುವೆಯೇ ಆಸ್ಪತ್ರೆಗೆ ತೆರಳಿದ್ದಾರೆ.

ಭಾರತದ ಇನ್ನಿಂಗ್ಸ್ ನ 4ನೇ ಓವರ್ ವೇಳೆ ಹೇಜಲ್ ವಡ್ ಎಸೆದ ಎಸೆತವನ್ನ ಶಿಖರ್ ಧವನ್ ಸ್ಟ್ರೇಟ್ ಡ್ರೈವ್ ಮಾಡಿದರು, ಈ ಚೆಂಡನ್ನು ಹಿಡಿಯುವ ಧಾವಂತದಲ್ಲಿ ಓಡಿ ಬಂದ ವಾರ್ನರ್, ಡೈವ್ ಮಾಡಿದರು. ಈ ವೇಳೆ ಅವರ ಬಲಗಾಲ ತೊಡೆಗೆ ಬಲವಾಗಿ ಪೆಟ್ಟು ಬಿದ್ದಿತು. ಕೂಡಲೇ  ಅಲ್ಲಿಯೇ ವಾರ್ನರ್ ಕುಸಿದುಬಿದ್ದರು. ಸ್ಥಳಕ್ಕಾಗಮಿಸಿದ ಫಿಸಿಯೋ ಧೆರಪಿ ಕೂಡಲೇ ವಾರ್ನರ್ ರನ್ನು ಡ್ರೆಸಿಂಗ್ ರೂಂಗೆ ಕರೆದೊಯ್ದು ಪ್ರಾಥಮಿಕ ಪರೀಕ್ಷೆ ನಡೆಸಿದರು. ಬಳಿಕ ಮುಂಜಾಗ್ರತಾ ಕ್ರಮವಾಗಿ ಸ್ಕಾನಿಂಗ್ ಗಾಗಿ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು.

ಆಸಿಸ್ ಪಡೆಯ ಬ್ಯಾಟಿಂಗ್ ಬೆನ್ನೆಲುಬಾಗಿರುವ ವಾರ್ನರ್ ಮೊದಲ ಪಂದ್ಯದಂತೆಯೇ ಈ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿ ಕೇವಲ 77 ಎಸೆತಗಳಲ್ಲಿ 83 ರನ್ ಸಿಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com