ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ದೊರೆತಿಲ್ಲ: ಗ್ರೆಗ್ ಬಾರ್ಕ್ಲೇ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಟೆಸ್ಟ್ ಕ್ರಿಕೆಟ್‌ಗೆ ಇದುವರೆಗೆ ಹೆಚ್ಚಿನ ಉತ್ತೇಜನ ದೊರೆತಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು(ಐಸಿಸಿ) ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅಭಿಪ್ರಾಯಪಟ್ಟಿದ್ದಾರೆ.
ಗ್ರೆಗ್ ಬಾರ್ಕ್ಲೇ
ಗ್ರೆಗ್ ಬಾರ್ಕ್ಲೇ

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಟೆಸ್ಟ್ ಕ್ರಿಕೆಟ್‌ಗೆ ಇದುವರೆಗೆ ಹೆಚ್ಚಿನ ಉತ್ತೇಜನ ದೊರೆತಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು(ಐಸಿಸಿ) ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅಭಿಪ್ರಾಯಪಟ್ಟಿದ್ದಾರೆ.

ವರ್ಚುವಲ್ ಮೀಡಿಯಾ ಸಮ್ಮೇಳನದಲ್ಲಿ ಬಾರ್ಕ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂದುಕೊಂಡಷ್ಟು ಲಾಭ ಪಡೆದಿಲ್ಲ ಎಂದು ಹೇಳಿದರು. ಐಸಿಸಿ ಅಧ್ಯಕ್ಷರ ಈ ಹೇಳಿಕೆಯು ಈ ಚಾಂಪಿಯನ್‌ಶಿಪ್‌ನ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಕೋವಿಡ್-19 ಸಾಂಕ್ರಾಮಿಕವು ಚಾಂಪಿಯನ್‌ಶಿಪ್‌ನ ಮೇಲೂ ಪರಿಣಾಮ ಬೀರಿದೆ ಎಂದು ಬಾರ್ಕ್ಲೇ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೂಲಕ ಟೆಸ್ಟ್ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲು ಅಳವಡಿಸಲಾಗಿತ್ತು. ಆದರೆ ಇದು ಸಂಭವಿಸದ ಸಂಗತಿಯಾಗಿದೆ. ಕೋವಿಡ್ ನಿಂದಾಗಿ ಪ್ರಸ್ತುತ ಕ್ರಿಕೆಟ್ ಕ್ಯಾಲೆಂಡರ್ ನಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗಿವೆ ಎಂದು ಬಾರ್ಕ್ಲೇ ಹೇಳಿದ್ದಾರೆ.

ಇದು ಯೋಜನೆ ಉತ್ತಮವಾಗಿದ್ದರೂ ಪ್ರಯೋಗಿಕವಾಗಿ ವಿಫಲವಾಗಿದೆ. ಆದರ್ಶವಾದಿಯ ದೃಷ್ಟಿಕೋನದಿಂದ, ಬಹುಶಃ ಇದು ಸಾಕಷ್ಟು ಅರ್ಹತೆಯನ್ನು ಹೊಂದಿತ್ತು. ಆದರೆ ಪ್ರಯೋಗಿಕವಾಗಿ, ನಾನು ಒಪ್ಪುವುದಿಲ್ಲ, ಅದು ಮಾಡಲು ಉದ್ದೇಶಿಸಿದ್ದನ್ನು ಸಾಧಿಸಿದೆ ಎಂದು ನನಗೆ ಖಚಿತವಿಲ್ಲ ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com