ಐಪಿಎಲ್‌-2020: ಬುಕ್ಕಿಗಳು ದುಬೈಗೆ ಬಂದಿದ್ದು, ಅಂದುಕೊಂಡದ್ದನ್ನು ಮಾಡಲು ವಿಫಲರಾಗಿದ್ದಾರೆ- ಬಿಸಿಸಿಐ

ಚಿನ್ನದ ಮೊಟ್ಟೆ ಇಡುವ ಐಪಿಎಲ್ ನಲ್ಲಿ ತಮ್ಮ ಕೈಚಳಕ ತೋರಿಸಲು ಬುಕ್ಕಿಗಳು ದುಬೈಗೆ ಬಂದಿದ್ದು ಆದರೆ ಅವರ ಆಟ ನಡೆಯಲಿಲ್ಲ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.
ಆರ್ ಸಿಬಿ
ಆರ್ ಸಿಬಿ

ದುಬೈ: ಚಿನ್ನದ ಮೊಟ್ಟೆ ಇಡುವ ಐಪಿಎಲ್ ನಲ್ಲಿ ತಮ್ಮ ಕೈಚಳಕ ತೋರಿಸಲು ಬುಕ್ಕಿಗಳು ದುಬೈಗೆ ಬಂದಿದ್ದು ಆದರೆ ಅವರ ಆಟ ನಡೆಯಲಿಲ್ಲ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಭಿಮಾನಿಗಳಲ್ಲಿ ಮಾತ್ರವಲ್ಲ, ಸಾವಿರಾರು ಕೋಟಿ ಆದಾಯ ತಂದುಕೊಡುವ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿದ್ದು ಅದರ ಮೇಲೆ ಬುಕ್ಕಿಗಳ ಕಣ್ಣು ಬಿದ್ದಿತ್ತು. ತ್ವರಿತಗತಿಯಲ್ಲಿ ಹಣ ಸಂಪಾದಿಸುವ ಸಲುವಾಗಿ ಬುಕ್ಕಿಗಳು ದುಬೈಗೆ ಬಂದಿದ್ದಾರೆ. ಆದರೆ ಅವರು ತಾವು ಅಂದುಕೊಂಡಂತೆ ಸ್ಫಾಟ್ ಫಿಕ್ಸಿಂಗ್ ಮಾಡಲು ಸಾಧ್ಯವಾಗಿಲ್ಲ ಎಂದು ಅಜಿತ್ ಸಿಂಗ್ ಹೇಳಿದ್ದಾರೆ. 

ಎಎನ್‌ಐ ಜೊತೆ ಮಾತನಾಡಿದ ಎಸಿಯು ಮುಖ್ಯಸ್ಥರು, ಬುಕ್ಕಿಗಳು ದುಬೈಗೆ ಬಂದಿದ್ದಾರೆ ಎಂಬುದು ತಂಡದ ಗಮನಕ್ಕೆ ಬಂದಿದೆ. ಆದರೆ ಪಂದ್ಯಾವಳಿಯ ಪಾವಿತ್ರ್ಯವನ್ನು ಮುರಿಯುವಲ್ಲಿ ಅವರು ಯಾವುದೇ ಪ್ರಗತಿಯನ್ನು ಸಾಧಿಸಲಿಲ್ಲ ಎಂದು ಅವರು ಹೇಳಿದರು.

"ದುಬೈನಲ್ಲಿ ಬುಕ್ಕಿಗಳು ಇದ್ದಾರೆ, ಆದರೆ ಅವರಿಗೆ ಯಾವುದೇ ಮುನ್ನಡೆಯಲು ಸಾಧ್ಯವಾಗಲಿಲ್ಲ. ಇಲ್ಲಿಯವರೆಗೆ ಎಲ್ಲವೂ ಸುಗಮ ನಡೆಯುತ್ತಿವೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ ) ಮತ್ತು ಸ್ಥಳೀಯ ಪೊಲೀಸರು ಬಹಳ ಸಹಾಯಕವಾಗಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.

ವಾಸ್ತವವಾಗಿ, ಭಾರತದಲ್ಲಿ ಪ್ರತಿ ಬಾರಿಯೂ ನಡೆಯುವ ಬೆಟ್ಟಿಂಗ್ ಚಟುವಟಿಕೆಗಳನ್ನು ಪತ್ತೆಹಚ್ಚುವ ಪೊಲೀಸರ ವರದಿಗಳನ್ನು ನಾವು ಪಡೆಯುತ್ತಿದ್ದೇವೆ ಎಂದು ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com