ಐಪಿಎಲ್-2020: ಬಾಲ್ ಗೆ ಎಂಜಲು ಹಚ್ಚಿ ರಾಬಿನ್ ಉತ್ತಪ್ಪ ಎಡವಟ್ಟು!

ಈ ಬಾರಿಯ ಐಪಿಎಲ್ ನಲ್ಲಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲಿ ಕಳಪೆ ಪ್ರದರ್ಶನ ನೀಡಿ ಸತತ ವೈಫಲ್ಯವನ್ನು ಅನುಭವಿಸುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ಅವರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಬಾಲಿಗೆ ಎಂಜಲು ಹಚ್ಚುತ್ತಿರುವ ರಾಬಿನ್ ಉತ್ತಪ್ಪ
ಬಾಲಿಗೆ ಎಂಜಲು ಹಚ್ಚುತ್ತಿರುವ ರಾಬಿನ್ ಉತ್ತಪ್ಪ

ದುಬೈ: ಈ ಬಾರಿಯ ಐಪಿಎಲ್ ನಲ್ಲಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲಿ ಕಳಪೆ ಪ್ರದರ್ಶನ ನೀಡಿ ಸತತ ವೈಫಲ್ಯವನ್ನು ಅನುಭವಿಸುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ಅವರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಉತ್ತಪ್ಪ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಬಹುಮುಖ್ಯ ನಿಯಮವೊಂದನ್ನು ಉಲ್ಲಂಘನೆ ಮಾಡಿದ್ದಾರೆ. 

ಬುಧವಾರದ ಪಂದ್ಯದಲ್ಲಿ ಟಾಸ್ ಸೋತಿದ್ದ ಕೋಲ್ತತ್ತಾ ಮೊದಲು ಬ್ಯಾಟಿಂಗ್'ಗೆ ಬಂದಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಜಯದೇವ್ ಉನಾದ್ಕಟ್ ಅವರು ಇನ್ನಿಂಗ್'ನ ಮೂರನೇ ಓವರ್ ಬೌಲ್ ಮಾಡುತ್ತಿದ್ದರು. ಆಗ ನೈಟ್ ರೈಡರ್ಸ್ ತಂಡ ಬ್ಯಾಟ್ಸ್'ಮ್ಯಾನ್ ಸುಲಿನ್ ನರೈನ್ ಅವರು ದೊಡ್ಡ ಹೊಡೆತಕ್ಕೆ ಕೈಹಾಕಿ ಉತ್ತಪ್ಪ ಅವರಿಗೆ ಕ್ಯಾಚ್ ನೀಡಿದ್ದರು. ಆದರೆ, ಸುಲಭ ಕ್ಯಾಚನ್ನು ಕೈಚೆಲ್ಲಿದ ಉತ್ತಪ್ಪ ಅವರು, ನಂತರ ಬಾಲಿಗೆ ಎಂಜಲು ಹಚ್ಚಿ ಕೊರೋನಾ ನಿಯಮ ಉಲ್ಲಂಘನೆ ಮಾಡಿದ್ದಾರೆ. 

ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಬಾಲಿಗೆ ಎಂಜಲು ಹಚ್ಚುವುದನ್ನು ಐಪಿಎಲ್ ನಿಷೇಧ ಮಾಡಿದೆ. ಈ ನಿಯಮ ಐಸಿಸಿ ಕೂಡ ಜಾರಿಗೆ ತಂದಿದ್ದು. ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲೂ ಬ್ಯಾನ್ ಮಾಡಲಾಗಿದೆ. ಜೊತೆಗೆ ಒಂದು ವೇಳೆ ಬಾಲಿಗೆ ಯಾವುದೇ ಆಟಗಾರ ಎಂಜಲು ಹಚ್ಚಿದ್ದೇ ಆದರೆ, ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಯ ತಪ್ಪಿಗೆ ಎದುರಾಳಿ ತಂಡಕ್ಕೆ ಬೌಲಿಂಗ್ ಮಾಡುತ್ತಿದ್ದ ತಂಡ 5 ರನ್'ಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಐಸಿಸಿ ನಿಯಮ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com