ಶ್ರೇಯಸ್, ಶಾ ಭರ್ಜರಿ ಬ್ಯಾಟಿಂಗ್: ಕೊಲ್ಕತ್ತಾ ವಿರುದ್ಧ 18 ರನ್ ನಿಂದ ಗೆದ್ದ ಡೆಲ್ಲಿ!

ಐಪಿಎಲ್ 13ನೇ ಆವೃತ್ತಿಯಲ್ಲಿ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ 18 ರನ್ ಗಳಿಂದ ಗೆಲುವು ಸಾಧಿಸಿದೆ.
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್

ದುಬೈ: ಐಪಿಎಲ್ 13ನೇ ಆವೃತ್ತಿಯಲ್ಲಿ ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ 18 ರನ್ ಗಳಿಂದ ಗೆಲುವು ಸಾಧಿಸಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 66 ಮತ್ತು ಶ್ರೇಯಸ್ ಅಯ್ಯರ್ 88 ರನ್ ಬಾರಿಸಿದ್ದು ಈ ಮೂಲಕ ನಿಗದಿತ ಓವರ್ ನಲ್ಲಿ ದೆಹಲಿ 4 ವಿಕೆಟ್ ನಷ್ಟಕ್ಕೆ 228 ಬೃಹತ್ ರನ್ ಮೊತ್ತ ಪೇರಿಸಿತು. 

ದೆಹಲಿ ನೀಡಿದ 229 ರನ್ ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಅಬ್ಬರ ಬ್ಯಾಟಿಂಗ್ ನಡೆಸಿತ್ತು. ಆದರೆ ಗುರಿ ತಲುಪುವಲ್ಲಿ ಸಾಧ್ಯವಾಗಿಲ್ಲ. ನಿಗದಿತ ಓವರ್ ನಲ್ಲಿ ಕೋಲ್ಕತ್ತಾ 8 ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಲಷ್ಟೇ ಸಾಧ್ಯವಾಗಿದ್ದು ಈ ಮೂಲಕ 18 ರನ್ ಗಳಿಂದ ಸೋಲು ಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com