ಐಪಿಎಲ್ 2020: ಮುಂಬಯಿ ಇಂಡಿಯನ್ಸ್ ಗೆ 34 ರನ್ ಗೆಲುವು
ಕ್ವಿಂಟನ್ ಡಿ ಕಾಕ್ (67) ಅವರ ಅರ್ಧಶತಕದ ಜತೆಗೆ ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಮುಂಬಯಿ ಇಂಡಿಯನ್ಸ್ ಐಪಿಎಲ್ 13ನೇ ಆವೃತ್ತಿಯ 17 ಪಂದ್ಯದಲ್ಲಿ 34 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಜಯದ ಸವಿಯುಂಡಿತು.
Published: 04th October 2020 08:08 PM | Last Updated: 04th October 2020 08:08 PM | A+A A-

ಮುಂಬೈ ಇಂಡಿಯನ್ಸ್
ಶಾರ್ಜಾ: ಕ್ವಿಂಟನ್ ಡಿ ಕಾಕ್ (67) ಅವರ ಅರ್ಧಶತಕದ ಜತೆಗೆ ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಮುಂಬಯಿ ಇಂಡಿಯನ್ಸ್ ಐಪಿಎಲ್ 13ನೇ ಆವೃತ್ತಿಯ 17 ಪಂದ್ಯದಲ್ಲಿ 34 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಜಯದ ಸವಿಯುಂಡಿತು.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬಯಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು.
ನಂತರ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 174 ರನ್ ಗಳಿಸಲಷ್ಟೇ ಶಕ್ತಗೊಂಡು ಹ್ಯಾಟ್ರಿಕ್ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು.