196 ಸಿಡಿಸಿ ಕೊಹ್ಲಿ ಪಡೆಗೆ ಸವಾಲಿನ ಮೊತ್ತ ನೀಡಿದ ಡೆಲ್ಲಿ ಕ್ಯಾಪಿಟಲ್ಸ್, 49 ರನ್ ಗೆ 3 ವಿಕೆಟ್ ಕಳೆದುಕೊಂಡ ಆರ್ಬಿಸಿ!

ಯುವ ಆಟಗಾರ ಪೃಥ್ವಿ ಶಾ(42) ಹಾಗೂ ಮಾರ್ಕಸ್ ಸ್ಟೋಯಿನಿಸ್(ಅಜೇಯ 53) ಇವರುಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲಿನ ಮೊತ್ತದ ಗುರಿ ನೀಡಿದೆ.

Published: 05th October 2020 10:04 PM  |   Last Updated: 05th October 2020 10:07 PM   |  A+A-


RCB-DC

ಆರ್ ಸಿಬಿ-ಡೆಲ್ಲಿ

Posted By : Vishwanath S
Source : UNI

ದುಬೈ: ಯುವ ಆಟಗಾರ ಪೃಥ್ವಿ ಶಾ(42) ಹಾಗೂ ಮಾರ್ಕಸ್ ಸ್ಟೋಯಿನಿಸ್(ಅಜೇಯ 53) ಇವರುಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲಿನ ಮೊತ್ತದ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ಗೆ 196 ರನ್ ಸೇರಿಸಿತು. ಪೃಥ್ವಿ ಶಾ 42, ಶಿಖರ್ ಧವನ್ 32, ರಿಷಬ್ ಪಂತ್ 37, ಶಿಮ್ರಾನ್ ಹೆಟ್ಮರ್ ಅಜೇಯ 11 ರನ್ ಗಳಿಸಿದ್ದಾರೆ. 

ಆರ್ಸಿಬಿ ಪರ ಬೌಲಿಂಗ್ ಮೊಹಮ್ಮದ್ ಸಿರಾಜ್ 2, ಮೋಹಿನ್ ಅಲಿ ಹಾಗೂ ಇಸುರು ಉದಾನ್ ತಲಾ 1 ವಿಕೆಟ್ ಪಡೆದಿದ್ದಾರೆ. 

197 ರನ್ ಗಳ ಗುರಿ ಬೆನ್ನಟ್ಟಿರುವ ಕೊಹ್ಲಿ ಪಡೆ 5 ಓವರ್ ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 38 ರನ್ ಪೇರಿಸಿದೆ. ಕೊಹ್ಲಿ ಅಜೇಯ 13 ಹಾಗೂ ಎಬಿ ಡಿವಿಲಿಯರ್ಸ್ ಅಜೇಯ 5 ರನ್ ಗಳಿಸಿ ಆಡುತ್ತಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp