ಆರ್‌ಸಿಬಿ ವೇಗಿ ನವದೀಪ್‌ ಸೈನಿ ನಡೆ ಖಂಡಿಸಿದ ಸುನೀಲ್‌ ಗವಾಸ್ಕರ್‌

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಸಂಘಟಿತ ಪ್ರದರ್ಶನ ತೋರಿದ ಶ್ರೇಯಸ್‌ ಅಯ್ಯರ್‌ ಬಳಗ 59 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಸೈನಿ
ಸೈನಿ

ದುಬೈ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಸಂಘಟಿತ ಪ್ರದರ್ಶನ ತೋರಿದ ಶ್ರೇಯಸ್‌ ಅಯ್ಯರ್‌ ಬಳಗ 59 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

ಪ್ರಥಮ ಇನಿಂಗ್ಸ್‌ನಲ್ಲಿ 196 ರನ್‌ಗಳನ್ನು ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್, ತನ್ನ ಬೌಲರ್‌ಗಳ ಯೋಜನೆಯನ್ನು ಸಕಾರಗೊಳಿಸುವ ಮೂಲಕ ಬಲಿಷ್ಠ ಬ್ಯಾಟಿಂಗ್‌ ಲೈನ್‌ ಅಪ್‌ ಹೊಂದಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 137 ರನ್‌ಗಳಿಗೆ ನಿಯಂತ್ರಿಸಿತು. ಮಾರ್ಕಸ್‌ ಸ್ಟೋಯ್ನಿಸ್‌ ಅಜೇಯ 53 ರನ್‌ಗಳನ್ನು ಗಳಿಸದೇ ಇದ್ದಿದ್ದರೆ ಡೆಲ್ಲಿಗೆ ಗೆಲುವು ಸಾಧಿಸುವುದು ಕಷ್ಟವಾಗುತ್ತಿತ್ತು.

ಆಸ್ಟ್ರೇಲಿಯಾ ಆಟಗಾರ ಈ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್‌ ಲಯವನ್ನು ಮುಂದುವರಿಸಿದ್ದಾರೆ. 90 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಕ್ರಿಸ್‌ಗೆ ಬಂದ ಸ್ಟೋಯ್ನಿಸ್‌, ಆರಂಭದಿಂದಲೂ ದೊಡ್ಡ ಹೊಡೆತಗಳಿಗೆ ಕೈ ಹಾಕಿದರು. ಆದರೆ, 15ನೇ ಓವರ್‌ನಲ್ಲಿ ಒಂದು ಕೆಟ್ಟ ಘಟನೆ ನಡೆಯಿತು. ಈಗಾಗಲೇ 10 ರನ್‌ಗಳನ್ನು ಗಳಿಸಿ ಆಡುತ್ತಿದ್ದ ಮಾರ್ಕಸ್‌ ಸ್ಟೋಯ್ನಿಸ್‌ಗೆ ನವದೀಪ್‌ ಸೈನಿ ವೇಗವಾಗಿ ಯಾರ್ಕರ್‌ ಹಾಕಲು ಪ್ರಯತ್ನಿಸಿ ನಿಯಂತ್ರಣ ಕಳೆದುಕೊಂಡರು.

ನಿಯಂತ್ರಣ ಕಳೆದುಕೊಂಡ ಚೆಂಡು ಮಾರ್ಕಸ್‌ ಸ್ಟೋಯ್ನಿಸ್‌ ಅವರ ಎದೆಯ ಮಟ್ಟಕ್ಕೆ ವೇಗವಾಗಿ ಮುನ್ನುಗ್ಗಿತು. ತಕ್ಷಣ ಈ ಎಸೆತಕ್ಕೆ ಪ್ರತಿಕ್ರಿಯಿಸಿದ ಸ್ಟೋಯ್ನಿಸ್‌ ಹೊಡೆಯಲು ಪ್ರಯತ್ನಿಸಿ ಬೆರಳಿಗೆ ತಗುಲಿಸಿಕೊಂಡರು. ಇದಕ್ಕೂ ಮುನ್ನ ನವದೀಪ್ ಸೈನಿ, ರಾಜಸ್ಥಾನ್‌ ರಾಯಲ್ಸ್ ತಂಡದ ರಾಹುಲ್‌ ತೆವಾಟಿವಾ ಅವರಿಗೂ 143 ವೇಗವಾಗಿ ಫುಲ್‌ ಟಾಸ್‌ ಹಾಕಿದ್ದರು. ಈ ಎಸೆತದಿಂದ ಸ್ಟೋಯ್ನಿಸ್‌ ಬೇಸರವಾಯಿತು. ಆದರೆ ಸೈನಿ, ಬ್ಯಾಟ್ಸ್‌ಮನ್‌ ಬಳಿ ತೆರಳಿ ಕ್ಷಮೆ ಕೇಳಲಿಲ್ಲ.

ಇದೇ ಸಮಯದಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಸುನೀಲ್‌ ಗವಾಸ್ಕರ್‌, ನವದೀಪ್‌ ಸೈನಿ ಬೀಮರ್‌ ಬಗ್ಗೆ ಪ್ರಶ್ನೆ ಮಾಡಿದರು. ಸೈನಿ, ಮಾರ್ಕಸ್ ಸ್ಟೋಯ್ನಿಸ್‌ ಬಳಿ ತೆರಳಿ ಕ್ಷಮೆಯಾಚಿಸಲಿಲ್ಲ, ಆದರೆ ಇದು ಉದ್ದೇಶಪೂರ್ವಕ ಬೀಮರ್ ಆಗಿರಬಹುದು ಎಂದು ಸುಳಿವು ನೀಡಿದರು. "ಇದು ತುಂಬಾ ವೇಗವಾಗಿತ್ತು. ನೀವು ಇದರ ಬಗ್ಗೆ ಏನಾದರೂ ಹೇಳಬಹುದು. ನೀವು ಏನೇ ಹೇಳಬಹುದು, ಯಾರ್ಕರ್‌ ಯಾವತ್ತು ಇಷ್ಟು ಮೇಲಕ್ಕೆ ಬರುವುದಿಲ್ಲ ಎಂದು ಗವಾಸ್ಕರ್‌ ತಿಳಿಸಿದರು.

ಒಂದು ವೇಳೆ ನೀವು ಫುಲ್‌ ಯಾರ್ಕರ್‌ ಹಾಕಿದರೂ, ಅದು ಮೊಣಕಾಲಿಗೆ ನೇರವಾಗಿರುತ್ತದೆ. ಇಲ್ಲದೆ ಇದ್ದರೂ ಮೊಣಕಾಲಿಗಿಂತ ಸ್ವಲ್ಪ ಮೇಲಕ್ಕೆ ಬರಬಹುದು.ಇದಕ್ಕಿಂತ ಮೇಲಿನ ಭಾಗಕ್ಕೆ ಎಸೆಯಲು ಸಾಧ್ಯವಿಲ್ಲ. ಬೌಲಿಂಗ್‌ ಮಾಡುವಾಗ ಸೈನಿ ಜಾರಿದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದು ಸುನೀಲ್‌ ಗವಾಸ್ಕರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com