ಅಣ್ಣ ನಿನ್ನ ದಮ್ಮಯ್ಯ, ಬ್ಯಾಟ್ ಮಾತ್ರ ಹಿಡಿಬೇಡ: ನಿಧಾನಗತಿಯ ಬ್ಯಾಟಿಂಗ್‌ ಜಾಧವ್‌ ವಿರುದ್ಧ ಮುಗಿಬಿದ್ದ ಟ್ರೋಲಿಗರು!

ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ರನ್‌ಗಳ ಸೋಲು ಅನುಭವಿಸಿದ ಬೆನ್ನಲ್ಲೆ ಸಿಎಸ್‌ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ ಅವರನ್ನು ನೆಟ್ಟಿಗರು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಕೇದಾರ್ ಜಾದವ್
ಕೇದಾರ್ ಜಾದವ್

ಅಬುಧಾಬಿ: ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ರನ್‌ಗಳ ಸೋಲು ಅನುಭವಿಸಿದ ಬೆನ್ನಲ್ಲೆ ಸಿಎಸ್‌ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ ಅವರನ್ನು ನೆಟ್ಟಿಗರು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ 168 ರನ್‌ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್ 10 ಓವರ್‌ಗಳಿಗೆ ಸುಭದ್ರ ಸ್ಥಿತಿಯಲ್ಲಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್‌ ವಾಟ್ಸನ್‌ ಹಾಗೂ ಫಾಫ್‌ ಡು ಪ್ಲೆಸಿಸ್‌ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಡುಪ್ಲೆಸಿಸ್‌ ಔಟ್‌ ಆದ ಬಳಿಕ ವಾಟ್ಸನ್‌ ಹಾಗೂ ಅಂಬಾಟಿ ರಾಯುಡು ಜೋಡಿ ಉತ್ತಮ ಬ್ಯಾಟಿಂಗ್‌ ಮುಂದುವರಿಸಿತ್ತು.

ಒಂದು ಹಂತದಲ್ಲಿ ಸಿಎಸ್‌ಕೆ 12ನೇ ಓವರ್‌ಗೆ ಒಂದು ವಿಕೆಟ್‌ ನಷ್ಟಕ್ಕೆ  99 ರನ್‌ಗಳನ್ನು ಗಳಿಸಿತ್ತು. ಈ ವೇಳೆ ಶೇನ್‌ ವಾಟ್ಸನ್‌ ಹಾಗೂ ಅಂಬಾಟಿ ರಾಯುಡು ಕ್ರೀಸ್‌ನಲ್ಲಿದ್ದರು. ಆದರೆ, ಕಮಲೇಶ್‌ ನಾಗರಕೋಟಿ ಅವರ ಎಸೆತದಲ್ಲಿ ಅಂಬಾಟಿ ರಾಯುಡು ಪೆವಿಲಿಯನ್‌ ಸೇರಿದ ಬಳಿಕ, ಕೆಕೆಆರ್‌ ಪಂದ್ಯದ ಮೇಲೆ ಹಂತ-ಹಂತವಾಗಿ ಹಿಡಿತ ಸಾಧಿಸಿತು. ಅಂತಿಮವಾಗಿ ಕೋಲ್ಕತಾ ನೈಟ್‌ ರೈಡರ್ಸ್ 10 ರನ್‌ಗಳ ಗೆಲುವು ಸಾಧಿಸಿತು. ಆದರೆ ಕೊನೆಯವರೆಗೂ ಕ್ರೀಸ್‌ನಲ್ಲಿದ್ದ ಕೇದಾರ್‌ ಜಾಧವ್‌ 12 ಎಸೆತಗಳಲ್ಲಿ ಗಳಿಸಿದ್ದು ಕೇವಲ 7 ರನ್‌ ಮಾತ್ರ.

ಚೆನ್ನೈ ಸೂಪರ್‌ ಕಿಂಗ್ಸ್ ಇನ್ನೇನು ಗುರಿ ಮುಟ್ಟುವ ಸಮೀಪದಲ್ಲಿತ್ತು. ಇಂತಹ ನಿರ್ಣಾಯಕ ಸಮಯದಲ್ಲಿ ಕಣಕ್ಕೆ ಇಳಿದಿದ್ದ ಕೇದಾರ್‌ ಜಾಧವ್‌ ಟೆಸ್ಟ್‌ ಪಂದ್ಯದ ಪಂದ್ಯದ ರೀತಿ ನಿಧಾನಗತಿಯ ಬ್ಯಾಟಿಂಗ್‌ ಮಾಡಿದರು. ಆ ಮೂಲಕ ಚೆನ್ನೈ ಫ್ರಾಂಚೈಸಿಯ ಸತತ ಎರಡನೇ ಸೋಲಿಗೆ ಇದು ಕಾರಣವಾಯಿತು ಎನ್ನಬಹುದು. ಇದರಿಂದ ಅಭಿಮಾನಿಗಳು ಆಕ್ರೋಶಕ್ಕೆ ಒಳಗಾಗಿ, ಟ್ವಿಟರ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮೇಲೆ ಮುಗಿಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com