'ಕೆಲ ಬ್ಯಾಟ್ಸ್ ಮನ್ ಗಳು ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ: ಸಿಎಸ್ ಕೆ ವಿರುದ್ಧ ಗುಡುಗಿದ ಸೆಹ್ವಾಗ್

ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್, ಕೆಲವು ಬ್ಯಾಟ್ಸ್‌ಮನ್‌ಗಳು ಫ್ರ್ಯಾಂಚೈಸ್‌ನ್ನು ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ.
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್

ನವದೆಹಲಿ:ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್, ಕೆಲವು ಬ್ಯಾಟ್ಸ್‌ಮನ್‌ಗಳು ಫ್ರ್ಯಾಂಚೈಸ್‌ನ್ನು ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ. ಇದರಲ್ಲಿ ಕಾರ್ಯಕ್ಷಮತೆಯನ್ನು ಲೆಕ್ಕಿಸದೆ ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬುಧವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 168 ರನ್‌ಗಳ ಗುರಿ ಬೆನ್ನಟ್ಟಿದ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಸತತ ಎರಡನೇ ಅರ್ಧಶತಕ ಸಿಡಿಸುವ ಮೂಲಕ ಸಿಎಸ್‌ಕೆಗೆ ಪರಿಪೂರ್ಣ ಆರಂಭವನ್ನು ನೀಡಿದರು, ಆದರೆ ತಂಡವು ಐದು ವಿಕೆಟ್ ಗಳ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಗಿ ನಾಲ್ಕನೇ ಸೋಲು ಅನುಭವಿಸಿತು.

"ಇದನ್ನು ಬೆನ್ನಟ್ಟಬೇಕಿತ್ತು, ಆದರೆ ಕೇದಾರ್ ಜಾಧವ್ ಮತ್ತು ರವೀಂದ್ರ ಜಡೇಜಾ ಆಡಿದ ಡಾಟ್ ಎಸೆತಗಳು ನೆರವು ನೀಡಲಿಲ್ಲ ಎಂದು ಕ್ರಿಕ್ ಬಜ್ ಗೆ ಸೆಹ್ವಾಗ್ ಹೇಳಿದ್ದಾರೆ.

ನನ್ನ ದೃಷ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಕೆಲ ಬ್ಯಾಟ್ಸ್ ಮನ್ ಗಳು ಫ್ರಾಂಚೈಸಿಯನ್ನು ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ. ಉತ್ತಮ ಪ್ರದರ್ಶನ ನೀಡಲಿ ಅಥವಾ ಬಿಡಲಿ, ಸಂಬಳವನ್ನು ಪಡೆಯಬಹುದು ಅಂದುಕೊಂಡಿದ್ದಾರೆ ಎಂದರು.

11-14 ಓವರ್ ಗಳಲ್ಲಿ ಸಿಎಸ್ ಕೆ ಕೇವಲ 14 ರನ್ ಗಳಿಸಿತು. ಇದೇ ಅವದಿಯಲ್ಲಿ ವ್ಯಾಟ್ಸನ್ ಹಾಗೂ ಅಂಬಟಿ ರಾಯುಡು ವಿಕೆಟ್ ಕಳೆದುಕೊಂಡಿತು.  ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರಿಗಿಂತ ಮುಂಚಿತವಾಗಿ ಕಳುಹಿಸಿದ ಕೇದಾರ್ ಜಾಧವ್ 12 ಎಸೆತಗಳಲ್ಲಿ ಏಳು ರನ್ ಗಳಿಸಿದರು. ಕೆಕೆಆರ್ 10 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com