ಐಪಿಎಲ್-2020: ರಾಜಸ್ತಾನ ರಾಯಲ್ಸ್ ಗೆ 46 ರನ್ ಸೋಲು, ಅಂಕಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನಕ್ಕೆ!

ವೇಗಿ ಕಗಿಸೊ ರಬಾಡ ಅವರ ಭರ್ಜರಿ ಪ್ರದರ್ಶನದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ 23ನೇ ಪಂದ್ಯದಲ್ಲಿ 46 ರನ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದೆ.

Published: 10th October 2020 12:15 AM  |   Last Updated: 10th October 2020 12:22 PM   |  A+A-


Delhi Capitals Team

ಡೆಲ್ಲಿ ಕ್ಯಾಪಿಟಲ್ಸ್ ತಂಡ

Posted By : Vishwanath S
Source : Online Desk

ಶಾರ್ಜಾ: ವೇಗಿ ಕಗಿಸೊ ರಬಾಡ ಅವರ ಭರ್ಜರಿ ಪ್ರದರ್ಶನದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ 23ನೇ ಪಂದ್ಯದಲ್ಲಿ 46 ರನ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದೆ.

ಆಡಿರುವ ಆರು ಪಂದ್ಯಗಳಲ್ಲಿ ಐದು ಜಯ ಸಾಧಿಸಿರುವ ಡೆಲ್ಲಿ 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಟೂರ್ನಿಯಲ್ಲಿ ರಾಯಲ್ಸ್ ತಂಡದ ನಾಲ್ಕನೇ ಸೋಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತ್ತು. ಡೆಲ್ಲಿ ಪರ ಶಿಮ್ರಾನ್ ಹೆಟ್ಮರ್ 45, ಮಾರ್ಕಸ್ ಸ್ಟೋಯಿನಿಸ್ 39 ಮತ್ತು ಶ್ರೇಯಸ್ ಅಯ್ಯರ್ 22 ರನ್ ಗಳಿಸಿದ್ದಾರೆ. 

ಡೆಲ್ಲಿ ನೀಡಿದ 185 ರನ್ ಗಳ ಗುರಿ ಬೆನ್ನಟ್ಟಿದ ರಾಯಲ್ಸ್ ತಂಡ 19.4 ಓವರ್ ನಲ್ಲಿ 138 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 46 ರನ್ ಗಳಿಂದ ಡೆಲ್ಲಿಗೆ ಶರಣಾಯಿತು. 

ರಾಯಲ್ಸ್ ಪರ ಬ್ಯಾಟಿಂಗ್ ನಲ್ಲಿ ರಾಹುಲ್ ತ್ರಿಪಾಟಿ 38, ಯಶಸ್ವಿ ಜೈಸ್ವಾಲ್ 34 ಮತ್ತು ಸ್ಟೀವ್ ಸ್ಮಿತ್ 24 ರನ್ ಗಳಿಸಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp