ಚೆನ್ನೈ ವಿರುದ್ಧ ವಿರಾಟ್ ಭರ್ಜರಿ ಬ್ಯಾಟಿಂಗ್; ಚಪ್ಪಾಳೆ, ಕಿಸ್ ನೀಡಿ ಗರ್ಭಿಣಿ ಅನುಷ್ಕಾ ಸಂಭ್ರಮ, ವಿಡಿಯೋ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್ ಗಳಿಂದ ಗೆಲುವು ಸಾಧಿಸಿತ್ತು. 
ಕೊಹ್ಲಿ-ಅನುಷ್ಕಾ
ಕೊಹ್ಲಿ-ಅನುಷ್ಕಾ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್ ಗಳಿಂದ ಗೆಲುವು ಸಾಧಿಸಿತ್ತು. 

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದು ಪತಿಯ ಬ್ಯಾಟಿಂಗ್ ಕಂಡು ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ, ಕಿಸ್ ನೀಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. 

ಚೆನ್ನೈ ವಿರುದ್ಧ ಪಂದ್ಯ ಗೆಲ್ಲುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಅನುಷ್ಕಾ ಮೈದಾನದಲ್ಲಿದ್ದ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಸಂಭ್ರಮಿಸಿದ್ದಾರೆ. ಅನುಷ್ಕಾ ಚಿಯರ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಂದ್ಯದಲ್ಲಿ ಕೊಹ್ಲಿ 52 ಎಸೆತಗಳಲ್ಲಿ ಬರೋಬ್ಬರಿ 90 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com