ಐಪಿಎಲ್ 2020: ಸುನಿಲ್ ನರೈನ್ ಬೌಲಿಂಗ್ ಕ್ರಮದ ಬಗ್ಗೆ ದೂರು, ಬೌಲಿಂಗ್ ನಿಷೇಧ ಸಾಧ್ಯತೆ!

ಕೋಲ್ಕತಾ ನೈಟ್ ರೈಡರ್ಸ್‌ನ ಸ್ಪಿನ್ನರ್ ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್ ಅವರು ಐಪಿಎಲ್‌ನಲ್ಲಿ ಬೌಲಿಂಗ್ ಕ್ರಮವನ್ನು ಮತ್ತೆ ಶಂಕಿಸಿ, ದೂರು ನೀಡಲಾಗಿದ್ದು, ಇದಕ್ಕಾಗಿ ಎಚ್ಚರಿಕೆ ನೀಡಲಾಗಿದೆ.
ಸುನೀಲ್ ನರೈನ್
ಸುನೀಲ್ ನರೈನ್

ಅಬುಧಾಬಿ: ಕೋಲ್ಕತಾ ನೈಟ್ ರೈಡರ್ಸ್‌ನ ಸ್ಪಿನ್ನರ್ ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್ ಅವರು ಐಪಿಎಲ್‌ನಲ್ಲಿ ಬೌಲಿಂಗ್ ಕ್ರಮವನ್ನು ಮತ್ತೆ ಶಂಕಿಸಿ, ದೂರು ನೀಡಲಾಗಿದ್ದು, ಇದಕ್ಕಾಗಿ ಎಚ್ಚರಿಕೆ ನೀಡಲಾಗಿದೆ.

ಅಬುಧಾಬಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ನರೈನ್ ಅವರ ಶಂಕಿತ ಬೌಲಿಂಗ್ ಕ್ರಮದ ಬಗ್ಗೆ ಆನ್-ಫೀಲ್ಡ್ ಅಂಪೈರ್‌ಗಳು ದೂರು ನೀಡಿದ್ದಾರೆ ಎಂದು ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ನರೈನ್ ಒಂದು ವೇಳೆ ಮತ್ತೆ ಅದೇ ರೀತಿಯ ಬೌಲಿಂಗ್ ಆ್ಯಕ್ಷನ್ ಮಾಡಿದರೆ ಅವರು ಟೂರ್ನಿಯಲ್ಲಿ ಬೌಲಿಂಗ್‌ನಿಂದ ಅಮಾನತಾಗಲಿದ್ದಾರೆ. ಮತ್ತೆ ನರೈನ್ ಬೌಲಿಂಗ್ ಮಾಡಬೇಕಾದರೆ ಬಿಸಿಸಿಐನಿಂದ ಅನುಮತಿ ಲಭಿಸಬೇಕಾಗುತ್ತದೆ.

18ನೇ ಓವರ್ ಬೌಲಿಂಗ್ ಮಾಡಿದ್ದ ಸುನೀಲ್ ನರೇನ್ ಅವರು ನಿಕೋಲಸ್ ಪೂರನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಈ ವಿಕೆಟ್ ಮೂಲಕ ಪಂದ್ಯದ ಗೆಲುವನ್ನು ಟರ್ನ್ ಮಾಡಿದರು. ಆದರೆ ಇದೇ ಬೌಲಿಂಗ್ ನರೈನ್ ಅವರಿಗೆ ಸಂಕಷ್ಟ ತಂದಿಟ್ಟಿದೆ. 

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 2 ರನ್ ಗಳಿಂದ ರೋಚಕ ಜಯ ಗಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com