ಐಪಿಎಲ್-2020: ಗಾಯಾಳು ರಿಷಭ್ ಪಂತ್ ಒಂದು ವಾರ ಅಲಭ್ಯ

ಐಪಿಎಲ್-2020 ಯ ಡೆಲ್ಲಿ-ರಾಜಸ್ಥಾನ್ ರಾಯಲ್ಸ್ ತಂಡದ ಪಂದ್ಯದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಕನಿಷ್ಟ ಒಂದು ವಾರದ ಕಾಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. 

Published: 12th October 2020 04:43 PM  |   Last Updated: 12th October 2020 04:43 PM   |  A+A-


Rishabh Pant

ರಿಷಭ್ ಪಂತ್

Posted By : Srinivas Rao BV
Source : PTI

ಐಪಿಎಲ್-2020 ಯ ಡೆಲ್ಲಿ-ರಾಜಸ್ಥಾನ್ ರಾಯಲ್ಸ್ ತಂಡದ ಪಂದ್ಯದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಕನಿಷ್ಟ ಒಂದು ವಾರದ ಕಾಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. 

ಡೆಲ್ಲಿ ನಾಯಕ ಶ್ರೇಯಶ್ ಅಯ್ಯರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಂತ್ ಕಾಲಿಗೆ ಗಾಯವಾಗಿರುವುದರಿಂದ ಒಂದು ವಾರ ಪಂದ್ಯಗಳನ್ನಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಅ.11 ರಂದು ನಡೆದ ಡೆಲ್ಲಿ-ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿಯೂ ರಿಷಭ್ ಪಂತ್ ಪಂದ್ಯವನ್ನಾಡಿರಲಿಲ್ಲ. ಈ ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್  ವೈದ್ಯರು ಪಂತ್ ಅವರಿಗೆ ಒಂದು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. 

ಅ.14 ರಂದು ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಅ.17 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯವನ್ನಾಡಬೇಕಿದೆ. 

Stay up to date on all the latest ಕ್ರಿಕೆಟ್ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp