ಆಟಕ್ಕೆ ನೀವು ಬೇಕಾಗಿದೆ: ಅಂತಾರಾಷ್ಟ್ರೀಯ ನಿವೃತ್ತಿಯಿಂದ ಎಬಿಡಿ ವಿಲಿಯರ್ಸ್ ಹೊರಬರಲು ರವಿಶಾಸ್ತ್ರಿ ಆಗ್ರಹ

ಅಂತಾರಾಷ್ಟ್ರೀಯ ಕ್ರಿಕಟ್ ನಿವೃತ್ತಿಯಿಂದ ಹೊರಬರುವಂತೆ ದಕ್ಷಿಣ ಆಫ್ರಿಕಾ ಮಾಜಿ ಕ್ಯಾಪ್ಟನ್ ಎಬಿಡಿ ವಿಲಿಯರ್ಸ್ ಗೆ  ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿ ಶಾಸ್ತ್ರಿ ಆಗ್ರಹಿಸಿದ್ದಾರೆ.
ಎಬಿಡಿ ವಿಲಿಯರ್ಸ್
ಎಬಿಡಿ ವಿಲಿಯರ್ಸ್

ಶಾರ್ಜಾ: ಅಂತಾರಾಷ್ಟ್ರೀಯ ಕ್ರಿಕಟ್ ನಿವೃತ್ತಿಯಿಂದ ಹೊರಬರುವಂತೆ ದಕ್ಷಿಣ ಆಫ್ರಿಕಾ ಮಾಜಿ ಕ್ಯಾಪ್ಟನ್ ಎಬಿಡಿ ವಿಲಿಯರ್ಸ್ ಗೆ  ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿ ಶಾಸ್ತ್ರಿ ಆಗ್ರಹಿಸಿದ್ದಾರೆ.

ಶಾರ್ಜಾದಲ್ಲಿ ನಡೆದ ಐಪಿಎಲ್ 20-20 ಪಂದ್ಯದಲ್ಲಿ ಆರ್ ಸಿಬಿ ಆಟಗಾರ  ಕೊಲ್ಕೋತ್ತಾ ನೈಟ್ ರೈಡರ್ಸ್  ವಿರುದ್ಧ ಎಬಿಡಿ ವಿಲಿಯರ್ಸ್ 73 ರನ್ ಗಳಿಸಿದ್ದರು.  33 ಬಾಲ್ ಗಳಿಗೆ 5 ಫೋರ್ ಮತ್ತು ಆರು ಸಿಕ್ಸ್ ಬಾರಿಸಿ ಆರ್ ಸಿಬಿ ತಂಡ 194/2 ರನ್ ಸಂಗ್ರಹಿಸಲು ನೆರವಾದರು. 

ನಿನ್ನೆ ನೋಡಿದ್ದು ಅವಾಸ್ತವ ಸಂಗತಿಯಾಗಿದೆ, ಎಬಿಡಿ ವಿಲಿಯರ್ಸ್ ಮತ್ತೆ ಆಟವಾಡಲು ಎಚ್ಚರವಾಗಿದ್ದಾರೆ ಎಂಬ ಭಾವನೆ ಮೂಡಿತು. ಆಟಕ್ಕೆ ನೀವು ಬೇಕಾಗಿದೆ, ಹೀಗಾಗಿ ಅಂತರಾಷ್ಟ್ರೀಯ ಪಂದ್ಯಗಳ ನಿವೃತ್ತಿಯಿಂದ ನೀವು ಹೊರಬರಬೇಕು, ಆಗ ಆಟ ಇನ್ನೂ ಚೆನ್ನಾಗಿರುತ್ತದೆ ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸ್ಫೋಟಕ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅದರಂತೆ ಈ ಜೋಡಿ ಮೊದಲ 6 ಓವರ್​ನಲ್ಲಿ 47 ರನ್ ಕಲೆಹಾಕಿತು. 8ನೇ ಓವರ್​ನ ರಸೆಲ್ ಬೌಲಿಂಗ್​ನಲ್ಲಿ
ಪಡಿಕ್ಕಲ್ ಬೋಲ್ಡ್​   ಈ ಜೋಡಿ 67 ರನ್​ಗಳ ಜೊತೆಯಾಟ ಆಡಿತು. ನಂತರ ಫಿಂಚ್ 37 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಬಾರಿಸಿ 47 ರನ್​​ಗೆ ಔಟ್ ಆದರು. ಬಳಿಕ ಕೊಹ್ಲಿ ಜೊತೆಯಾದ ಎಬಿ ಡಿವಿಲಿಯರ್ಸ್​ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಎಬಿಡಿ ವಿಲಿಯರ್ಸ್ 2018 ರಲ್ಲಿ ನಿವೃತ್ತಿ ಹೊಂದುವ ಮೊದಲು ರಾಷ್ಟ್ರೀಯ ತಂಡಕ್ಕಾಗಿ 114 ಟೆಸ್ಟ್, 228 ಏಕದಿನ ಮತ್ತು 78 ಟಿ 20  ಪಂದ್ಯಗಳನ್ನು ಆಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com