ಹಿರಿಯ ಕ್ರೀಡಾ ಪತ್ರಕರ್ತ, ಕ್ರಿಕೆಟ್ ಕಮೆಂಟೇಟರ್ ಕಿಶೋರ್ ಭೀಮಾನಿ ನಿಧನ

ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಕ್ರಿಕೆಟ್ ಕಮೆಂಟೇಟರ್ ಕಿಶೋರ್ ಭೀಮಾನಿ (74) ನಿಧನವಾಗಿದ್ದಾರೆ. 
ಕಿಶೋರ್ ಭೀಮಾನಿ
ಕಿಶೋರ್ ಭೀಮಾನಿ

ಕೋಲ್ಕತ್ತಾ: ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಕ್ರಿಕೆಟ್ ಕಮೆಂಟೇಟರ್ ಕಿಶೋರ್ ಭೀಮಾನಿ (74) ನಿಧನವಾಗಿದ್ದಾರೆ. 

ಮೃತರು ಅವರ ಪತ್ನಿ ರೀಟಾ ಮತ್ತು ಮಗ ಗೌತಮ್ ಅವ್ರನ್ನು ಅಗಲಿದ್ದಾರೆ. 

"ಅವರು ಕೆಲವು ದಿನಗಳ ಹಿಂದೆ ಸೆರೆಬ್ರಲ್ ಅಟ್ಯಾಕ್ ನಿಂದ  ಬಳಲುತ್ತಿದ್ದರು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು"  ಕುಟುಂಬದ ಮೂಲಗಳು ತಿಳಿಸಿವೆ.

ಭೀಮಾನಿ 1980 ರ ದಶಕದ ಅತ್ಯಂತ ಗುರುತಿಸಲ್ಪಟ್ಟ ಇಂಗ್ಲಿಷ್ ಕಮೆಂಟಿರಿಯನ್ ಗಳಲ್ಲಿ ಒಬ್ಬರಾಗಿದ್ದಾರೆ.

ಭಾರತದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಸೇರಿದಂತೆ ಅನೇಕರು ಭೀಮಾನಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

1987 ರಲ್ಲಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಡ್ರಾ ಪಂದ್ಯದ ವೇಳೆ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದಾಗ ಭೀಮಾನಿ ಪಂದ್ಯದ ಕಮೆಂಟರಿ ಮಾಡಿದ್ದರು. 1980 ರ ದಶಕದಲ್ಲಿ ಬ್ರಿಟಿಷ್ ಪ್ರಕಟಣೆಗಳಿಂಡ ಆಕರ್ಷಿತರಾಗುವ ಭಾರತೀಯ ಕ್ರಿಕೆಟ್ ಬರಹಗಾರರಲ್ಲಿ ಒಬ್ಬರಾದ ಭೀಮಾನಿ 1986 ರ ಆಸ್ಟ್ರೇಲಿಯಾದ ವಿರುದ್ಧ ಚೆಪಾಕ್ ನಲ್ಲಿ  ನಡೆದ ಪ್ರಸಿದ್ಧ ಟೆಸ್ಟ್ಪಂದ್ಯದ ಅಂತಿಮ ಕ್ಷಣಗಳ ಸಾಕ್ಷಿಯಾಗಿದ್ದರು.

ಇಮ್ರಾನ್ ಖಾನ್ ಪಾಕ್ ಕ್ರಿಕೆಟ್ ತಂಡದ ನಾಯಕನಾಗಿದ್ದ ಸಮಯದಲ್ಲಿ ಕೋಲ್ಕತ್ತಾದಲ್ಲಿದ್ದಾಗ ಭೀಮನಿಯ ನಿವಾಸದಲ್ಲಿ ನಿಯಮಿತ ಭೇಟಿಯಾಗುತ್ತಿತ್ತು ಎನ್ನಲಾಗಿದೆ.  ಕೋಲ್ಕತಾ ದಿನಪತ್ರಿಕೆ 'ದಿ ಸ್ಟೇಟ್ಸ್‌ಮನ್' ನಲ್ಲಿ ಕೆಲಸ ಮಾಡಿದ್ದ ಭೀಮಾನಿ ಅಲ್ಲಿ ಪ್ರಸಿದ್ಧ ಅಂಕಣಕಾರರಾಗಿದ್ದರು. ಅವರು 1978 ರಿಂದ 1980 ರವರೆಗೆ ಕಲ್ಕತ್ತಾ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಕ್ಲಬ್‌ನ ಅಧ್ಯಕ್ಷರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com