ಐಪಿಎಲ್-2020: ಪ್ರ್ಯಾಕ್ಟಿಸ್ ಪ್ಯಾಂಟ್ ನಲ್ಲೆ ಡಿ ಕಾಕ್ ಸ್ಫೋಟಕ ಬ್ಯಾಟಿಂಗ್; ತಲೆಕೆಡಿಸಿಕೊಂಡ ಪ್ರಾಯೋಜಕರು!

ನಿನ್ನೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ ಮನ್  ಡಿ ಕಾಕ್ ಪ್ರ್ಯಾಕ್ಟಿಸ್ ಪ್ಯಾಂಟ್ ನಲ್ಲೆ  ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ.
ಡಿ ಕಾಕ್  ಅವರ ಸ್ಪೂಟಕ ಬ್ಯಾಟಿಂಗ್ ಶೈಲಿ
ಡಿ ಕಾಕ್ ಅವರ ಸ್ಪೂಟಕ ಬ್ಯಾಟಿಂಗ್ ಶೈಲಿ

ಅಬುದಾಬಿ: ನಿನ್ನೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ ಮನ್  ಡಿ ಕಾಕ್ ಪ್ರ್ಯಾಕ್ಟಿಸ್ ಪ್ಯಾಂಟ್ ನಲ್ಲೆ  ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ.

ಕೆಕೆಆರ್ ವಿರುದ್ಧ 8 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್  ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.ಮತ್ತೆ ಈ ರೀತಿ ಎಂದಿಗೂ ಮಾಡದಂತೆ ಮುಂಬೈ ಇಂಡಿಯನ್ಸ್ ತರಬೇತುದಾರ ಮಹೇಲಾ ಜಯವರ್ದನೆ ಡಿ ಕಾಕ್ ಅವರಿಗೆ ಹೇಳಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಡಿ ಕಾಕ್ ಅಜೇಯ 78 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.

ಮಾರ್ಕೆಟಿಂಗ್ ಹುಡುಗರು ಹಾಗೂ ಜನರು ನೆಟ್ ಕಡೆಗೆ ಹೋಗುತ್ತಿರುತ್ತಾರೆ. ಆದ್ದರಿಂದ ಮತ್ತೆ ಈ ರೀತಿ ಮಾಡದಂತೆ  ಜಯವರ್ದನೆ ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com