ಐಪಿಎಲ್ 2020: ಎಬಿಡಿ ಹ್ಯಾಟ್ರಿಕ್ ಸಿಕ್ಸ್, ರಾಯಲ್ಸ್ ವಿರುದ್ಧ ಗೆದ್ದ ಆರ್‌ಸಿಬಿ, ಪ್ಲೇ ಆಫ್ ಸ್ಥಾನ ಭದ್ರ

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. 
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್

ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತ್ತು. 

ರಾಯಲ್ಸ್ ನೀಡಿದ 178 ರನ್ ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆಸರೆಯಾಗಿದ್ದು ಡಿವಿಲಿಯರ್ಸ್. ಹೌದು 22 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿ ಗೆಲುವಿನ ದಡ ಸೇರಿಸಿದರು. 

ಇನ್ನು ಆರ್ ಸಿಬಿ ಪರ ಪಡಿಕ್ಕಲ್ 35, ಆರೋನ್ ಪಿಂಚ್ 14, ಕೊಹ್ಲಿ 43, ಡಿವಿಲಿಯರ್ಸ್ ಅಜೇಯ 55 ಮತ್ತು ಗುರ್ಕೀರತ್ ಸಿಂಗ್ ಅಜೇಯ 19 ರನ್ ಪೇರಿಸಿದ್ದಾರೆ. 

ರಾಯಲ್ಸ್ ಪರ ಬ್ಯಾಟಿಂಗ್ ನಲ್ಲಿ ರಾಬಿನ್ ಉತ್ತಪ್ಪ 41, ಬೆನ್ ಸ್ಟೋಕ್ಸ್ 15, ಸ್ಟೀವ್ ಸ್ಮಿತ್ 57, ಜೋಸ್ ಬಟ್ಲರ್ 24, ರಾಹುಲ್ ತೆವಾಟಿಯಾ ಅಜೇಯ 19 ರನ್ ಗಳಿಸಿದ್ದಾರೆ. 

ಈ ಪಂದ್ಯ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಆರ್ ಸಿಬಿ 9 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು ಬೀಗಿದೆ. ಇನ್ನು ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com