ಪಂದ್ಯ ಗೆಲ್ಲಿಸಲು ಡಿವಿಲಿಯರ್ಸ್ ಪಯತ್ನಿಸುತ್ತಿದ್ದರೆ ಅತ್ತ ಡ್ರೆಸ್ಸಿಂಗ್ ರೂಮಿನಲ್ಲಿ ಸಿಗರೇಟ್ ಸೇದಿದ ಪಿಂಚ್ - ವಿಡಿಯೋ

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಆರೋನ್ ಪಿಂಚ್ ಇ-ಸಿಗರೇಟ್ ಸೇದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 
ಡಿವಿಲಿಯರ್ಸ್-ಪಿಂಚ್
ಡಿವಿಲಿಯರ್ಸ್-ಪಿಂಚ್

ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಆರೋನ್ ಪಿಂಚ್ ಇ-ಸಿಗರೇಟ್ ಸೇದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ರಾಯಲ್ಸ್ ವಿರುದ್ಧ ಬೆಂಗಲೂರು ತಂಡದ ಸೋಲಿನ ಸುಳಿಯಲ್ಲಿತ್ತು. ಈ ವೇಳೆ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಎಬಿ ಡಿವಿಲಿಯರ್ಸ್ 22 ಎಸೆತಗಳಲ್ಲಿ 55 ರನ್ ಬಾರಿಸುವ ಮೂಲಕ ಗೆಲುವು ತಂದು ಕೊಟ್ಟಿದ್ದರು. 

ಒತ್ತಡದಲ್ಲೂ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಗೆ ಮುಂದಾಗಿದ್ದರು. ಇತ್ತ ಆರೋನ್ ಪಿಂಚ್ ಡೆಸ್ಸಿಂಗ್ ರೂಂನಲ್ಲಿ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ. 

ಭಾರತದಲ್ಲಿ ಇ-ಸಿಗರೇಟ್ ಸೇದುವುದು ನಿಷೇಧವಾಗಿದೆ. ಅದೇ ರೀತಿ ಯುಎಇಯಲ್ಲೂ ಕೂಡ ಬ್ಯಾನ್ ಆಗಿರವುದರು ಈಗ ವಿವಾದಕ್ಕೆ ಕಾರಣವಾಗಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ ತಂಡ ನಿಗದಿತ ಓವರ್ ನಲ್ಲಿ 177 ರನ್ ಕಲೆಹಾಕಿತ್ತು. ಇನ್ನು 178 ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಇನ್ನು 2 ಎಸೆತ ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿ 7 ವಿಕೆಟ್ ಗಳಿಂದ ಭರ್ಜರಿ ಗೆಲುವು ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com