ಸೋಲಿನ ನಂತರ ಸೂಪರ್‌ ಕಿಂಗ್ಸ್‌ಗೆ ಮತ್ತೊಂದು ಬರೆ, ಗಾಯಾಳು ಬ್ರಾವೋ 2 ವಾರಗಳ ಕಾಲ ಔಟ್!

ಗೆಲುವಿನ ಫಾರ್ಮುಲಾ ಕಂಡುಕೊಳ್ಳುವುದರಲ್ಲಿದ್ದ ಮೂರು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅಚ್ಚರಿಯ ಸೋಲನುಭವಿಸಿತು.
ಬ್ರಾವೋ-ಧೋನಿ
ಬ್ರಾವೋ-ಧೋನಿ

ಶಾರ್ಜಾ: ಗೆಲುವಿನ ಫಾರ್ಮುಲಾ ಕಂಡುಕೊಳ್ಳುವುದರಲ್ಲಿದ್ದ ಮೂರು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅಚ್ಚರಿಯ ಸೋಲನುಭವಿಸಿತು.

ಪಂದ್ಯದ ಕೊನೆ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಇಲ್ಲಿ ಸಿಎಸ್‌ಕೆ ತಂಡಕ್ಕೆ ಪರಿಣತ ಬೌಲರ್‌ ಹಾಗೂ ಡೆತ್‌ ಓವರ್‌ ಸ್ಪೆಷಲಿಸ್ಟ್‌ ಡ್ವೇನ್‌ ಬ್ರಾವೋ ಅವರ ಸೇವೆ ಲಭ್ಯವಾಗದೇ ಹೋದದ್ದು ಧೋನಿ ಪಡೆಯ ಸೋಲಿಗೆ ಮುಖ್ಯ ಕಾರಣವಾಯಿತು.

ಅಂದಹಾಗೆ ಇನಿಂಗ್ಸ್‌ ಮಧ್ಯದಲ್ಲಿ ತೊಡೆ ಸಂಧು ನೋವಿನ ಸಮಸ್ಯೆಗೆ ತುತ್ತಾದ ಡ್ವೇನ್‌ ಬ್ರಾವೋ ಮರಳಿ ಫೀಲ್ಡ್‌ಗೆ ಇಳಿಯದೇ ಇದ್ದ ಕಾರಣ ಧೋನಿಗೆ ಅನಿವಾರ್ಯವಾಗಿ ರವೀಂದ್ರ ಚಡೇಜಾ ಅವರಿಂದ ಕೊನೆಯ ಓವರ್‌ ಬೌಲಿಂಗ್‌ ಮಾಡಿಸುವಂತಾಯಿತು. ಅಂತಿಮವಾಗಿ ಜಡೇಜಾ ಎದುರು ಡೆಲ್ಲಿ ಬ್ಯಾಟ್ಸ್‌ಮನ್‌ ಅಕ್ಷರ್‌ ಪಟೇಲ್‌ ಮೂರು ಸಿಕ್ಸರ್‌ ಸಿಡಿಸಿ ಕ್ಯಾಪಿಟಲ್ಸ್‌ಗೆ ಗೆಲುವಿನ ಮಾಲೆ ತೊಡಿಸಿದರು.

ಈ ಅಚ್ಚರಿಯ ಸೋಲಿನ ಬೆನ್ನಲ್ಲೇ ಸಿಎಸ್‌ಕೆ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದ್ದು, ಗಾಯಾಳು ಡ್ವೇನ್‌ ಬ್ರಾವೋ ಮುಂದಿನ ಒಂದೆರಡು ವಾರ ತಂಡದ ಸೇವೆಗೆ ಲಭ್ಯರಾಗುವುದು ಅನುಮಾನ ಎಂದು ಸಿಎಸ್‌ಕೆ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಮಾಹಿತಿ ನೀಡಿದ್ದಾರೆ.

"ಬ್ರಾವೋ ಬಲ ತೊಡೆಯ ಸಂಧು ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ. ಗಾಯದ ಸಮಸ್ಯೆ ಗಂಭೀರವಾಗಿದ್ದ ಕಾರಣಕ್ಕೆ ಅವರನ್ನು ಪಂದ್ಯದಲ್ಲಿ ಮುಂದುವರಿಯಲು ಬಿಡಲಿಲ್ಲ. ಫೈನಲ್‌ ಓವರ್‌ ಬೌಲಿಂಗ್‌ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಬ್ರಾವೋ ಬಹಳ ಬೇಸರದಲ್ಲಿದ್ದಾರೆ. ಡೆತ್ ಓವರ್‌ಗಳ ಬೌಲಿಂಗ್‌ ಸಲುವಾಗಿಯೇ ಬ್ರಾವೋ ತಂಡದಲ್ಲಿ ಇರುವುದು. ದುರದೃಷ್ಟ ವಶಾತ್‌ ಅವರಿಂದ ಈ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಫ್ಲೆಮಿಂಗ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com