ಅಂತಿಮ ಕ್ಷಣದಲ್ಲಿ ಎಂಎಸ್ ಧೋನಿಯ ಕೆಟ್ಟ ನಿರ್ಧಾರ, ಪಂದ್ಯ ಕೈಚೆಲ್ಲುವಂತಾಯ್ತಾ: ಜಮೈಕಾ ಓಟಗಾರ ಯೋಹನ್ ಬ್ಲೇಕ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ "ಬಹಳ ಸಮಯದ ನಂತರ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಸ್ಟಾರ್ ಸ್ಪ್ರಿಂಟರ್ ಯೋಹನ್ ಬ್ಲೇಕ್ ಹೇಳಿದ್ದಾರೆ.
ಬ್ಲೇಕ್-ಬ್ರಾವೋ-ಧೋನಿ
ಬ್ಲೇಕ್-ಬ್ರಾವೋ-ಧೋನಿ

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ "ಬಹಳ ಸಮಯದ ನಂತರ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಸ್ಟಾರ್ ಸ್ಪ್ರಿಂಟರ್ ಯೋಹನ್ ಬ್ಲೇಕ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಗಳಿಂದ ಸೋಲು ಕಂಡಿತ್ತು. ಇನ್ನು ಕೊನೆಯ ಓವರ್ ಅನ್ನು ರವೀಂದ್ರ ಜಡೇಜಾಗೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕನ ನಿರ್ಧಾರವನ್ನು ಬ್ಲೇಕ್ ಪ್ರಶ್ನಿಸಿದ್ದಾರೆ.

ಪ್ರತಿಯೊಬ್ಬರ ಆದ್ಯತೆಯ ಆಯ್ಕೆ, ಡೆತ್ ಬೌಲಿಂಗ್ ತಜ್ಞ ಡ್ವೇನ್ ಬ್ರಾವೋಗೆ ನೀಡುವ ಬದಲು ಜಡೇಜಾಗೆ ನೀಡಿದ್ದೇಕೆ. "ಧೋನಿ ಬಹಳ ಸಮಯದ ನಂತರ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಭಾವಿಸುತ್ತೇನೆ. ಕೊನೆಯ ಓವರ್ ನಲ್ಲಿ ಜಡೇಜಾರಿಂದ ಬೌಲಿಂಗ್ ಮಾಡಿಸುವ ಕೆಟ್ಟ ನಿರ್ಧಾರ. ಬ್ರಾವೋಗೆ ಏನಾಯಿತು. ನಿಜವಾಗಿಯೂ?" ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕೇಳಿದರು.

"ಜಡೇಜಾ ಆಯ್ಕೆ ಮಹೇಂದ್ರ ಸಿಂಗ್ ಧೋನಿ ಅವರ ಕೆಟ್ಟ ಆಯ್ಕೆ. ಎಡಗೈ ಬ್ಯಾಟ್ಸ್‌ಮನ್‌ಗೆ ಜಡೇಜಾ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಕಿರಿಯ 100 ಮೀ ವಿಶ್ವ ಚಾಂಪಿಯನ್‌ಶಿಪ್ ವಿಜೇತ ಬ್ಲೇಕ್ ಟ್ವೀಟ್ ಮಾಡಿದ್ದರು.

ಆದರೆ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂಭಾಷಣೆಯಲ್ಲಿ ತೊಡಗಿದ್ದ ಬ್ಲೇಕ್ ನಂತರ ಬ್ರಾವೋ ಗಾಯಗೊಂಡಿದ್ದಾರೆಂದು ಅರಿತುಕೊಂಡರು.

ಅನುಭವಿ ವೆಸ್ಟ್ ಇಂಡಿಯನ್ ಆಲ್‌ರೌಂಡರ್ ಬ್ರಾವೋ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಕನಿಷ್ಠ ಅಂದರೂ ಒಂದೆರಡು ವಾರಗಳವರೆಗೆ ವಿಶ್ರಾಂತಿ ಪಡೆಯಬೇಕಿದೆ. 

ಕೊನೆಯ ಓವರ್ ನಲ್ಲಿ ಡೆಲ್ಲಿ ಗೆಲ್ಲಲು 17 ರನ್ ಗಳ ಅವಶ್ಯಕತೆ ಇತ್ತು. ಇದು ಸ್ಪರ್ಧಾತ್ಮಕ ಮೊತ್ತವಾಗಿದ್ದರಿಂದ ಚೆನ್ನೈ ಗೆಲ್ಲಬಹುದು ಎಂದು ಅಭಿಮಾನಿಗಲು ಅಂದುಕೊಂಡಿದ್ದರು. ಆದರೆ ಜಡೇಜಾ ಬೌಲಿಂಗ್ ನಿಂದಾಗಿ ಚೆನ್ನೈ ಪಂದ್ಯವನ್ನು ಕೈಚೆಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com