ಐಪಿಎಲ್‌ ಟೂರ್ನಿಯಲ್ಲಿ ವಿಶಿಷ್ಟ ದಾಖಲೆ ಬರೆದ ಕೆ.ಎಲ್‌ ರಾಹುಲ್‌

ಮುಂಬೈ ಇಂಡಿಯನ್ಸ್ ವಿರುದ್ಧ ಎರಡನೇ ಸೂಪರ್‌ ಓವರ್‌ ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಕೆ.ಎಲ್‌ ರಾಹುಲ್ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್)ನಲ್ಲಿ ವಿಶಿಷ್ಠ ದಾಖಲೆಯೊಂದನ್ನು ಮಾಡಿದರು.
ಕೆಎಲ್ ರಾಹುಲ್
ಕೆಎಲ್ ರಾಹುಲ್

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಎರಡನೇ ಸೂಪರ್‌ ಓವರ್‌ ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಕೆ.ಎಲ್‌ ರಾಹುಲ್ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್)ನಲ್ಲಿ ವಿಶಿಷ್ಠ ದಾಖಲೆಯೊಂದನ್ನು ಮಾಡಿದರು.

ಸತತ ಮೂರು ಐಪಿಎಲ್‌ ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಪಂಜಾಬ್‌ ನಾಯಕ ಭಾಜನರಾದರು.

ನಿಗದಿತ 20 ಓವರ್‌ಗಳಲ್ಲಿ ಎರಡೂ ತಂಡಗಳು ಆರು ವಿಕೆಟ್‌ಗಳನ್ನು ಕಳೆದುಕೊಂಡು 176 ರನ್‌ಗಳಿಸಿದವು. ಪಂದ್ಯ ಟೈ ಆಗಿದ್ದರಿಂದ ಸೂಪರ್‌ ಓವರ್‌ಗೆ ಮೊರೆ ಹೋಗಬೇಕಾಯಿತು. ಮೊದಲನೇ ಸೂಪರ್‌ ಓವರ್‌ ಕೂಡ ಟೈ ಆಗಿತು. ಎರಡನೇ ಸೂಪರ್‌ ಓವರ್‌ನಲ್ಲಿ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಮೇಲುಗೈ ಸಾಧಿಸಿತು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ರಾಹುಲ್‌ ಪಡೆ ಮೂರನೇ ಗೆಲುವು ಸಾಧಿಸಿತು.

2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ 9 ಇನಿಂಗ್ಸ್‌ಗಳಲ್ಲಿ ಕೆ.ಎಲ್‌ ರಾಹುಲ್‌ 525 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ಇಷ್ಟೇ ಇನಿಂಗ್ಸ್‌ಗಳನ್ನು ಆಡಿರುವ ಮಯಾಂಕ್‌ ಅಗರ್ವಾಲ್‌ 393 ರನ್‌ಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. 2019ರ ಆವೃತ್ತಿಯಲ್ಲಿ 593 ರನ್‌ಗಳನ್ನು ಗಳಿಸಿದ್ದ ರಾಹುಲ್‌, 2018ರ ಆವೃತ್ತಿಯಲ್ಲಿ 659 ರನ್‌ಗಳನ್ನು ಕಲೆ ಹಾಕಿದ್ದರು.

2018ರ ಏಪ್ರಿಲ್‌ನಿಂದ ಐಪಿಎಲ್‌ ಟೂರ್ನಿಯಲ್ಲಿ ಕೆ.ಎಲ್‌ ರಾಹುಲ್‌ ದಾಖಲೆಯ 19 ಅರ್ಧಶತಕಗಳೊಂದಿಗೆ ಒಟ್ಟು 1777 ರನ್‌ಗಳನ್ನು ಗಳಿಸಿದ್ದಾರೆ. ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌(359* ಪ್ರಸ್ತುತ ಆವೃತ್ತಿ) 1377 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಡೇವಿಡ್‌ ವಾರ್ನರ್‌ 1023 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಭಾನುವಾರ ರಾತ್ರಿ ಮುಂಬೈ ವಿರುದ್ಧ 51 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿದ ರಾಹುಲ್‌, "ನಿರ್ಣಾಯಕ ಸನ್ನಿವೇಶದಲ್ಲಿ ಹಿರಿಯ ಆಟಗಾರರು ಅದ್ಭುತವಾಗಿ ಪ್ರದರ್ಶನ ತೋರಿದ್ದಾರೆ. ಕಿಂಗ್ಸ್ ಇಲೆವೆನ್‌ ಪಂಜಾಬ್‌ ಮುಂದಿನ ಪಂದ್ಯಗಳಲ್ಲೂ ಇದೇ ಲಯವನ್ನು ಉಳಿಸಿಕೊಂಡು ಗೆಲುವಿಗಾಗಿ ಹೋರಾಟ ನಡೆಸಲಿದೆ," ಎಂದು ಪಂದ್ಯದ ಬಳಿಕ ಹೇಳಿದ್ದಾರೆ.

ಎರಡನೇ ಸೂಪರ್‌ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 12 ರನ್‌ಗಳ ಗುರಿಯನ್ನು ಕ್ರಿಸ್‌ ಗೇಲ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಮುಗಿಸಿದರು. 2019ರ ವಿಶ್ವಕಪ್‌ನಂತೆ, ಮತ್ತೊಮ್ಮೆ ಟ್ರೆಂಟ್‌ ಬೌಲ್ಟ್ ಸೂಪರ್‌ ಓವರ್‌ನಲ್ಲಿ ಹಿನ್ನಡೆ ಅನುಭವಿಸಿದರು.

"ನೀವು ಸೂಪರ್‌ ಓವರ್‌ಗೆ ಸಿದ್ದತೆ ನಡೆಸಿರುವುದಿಲ್ಲ, ಯಾವುದೇ ತಂಡ ಕೂಡ ತಯಾರಿ ನಡೆಸಿರುವುದಿಲ್ಲ. ನೀವು ನಿಮ್ಮ ಬೌಲಿಂಗ್‌ ವಿಭಾಗದ ಮೇಲೆ ನಂಬಿಕೆ ಇಟ್ಟಿರಬೇಕಾಗುತ್ತದೆ. ಅವರ ಪ್ರವೃತ್ತಿ ಮತ್ತು ಸಾಮರ್ಥ್ಯವನ್ನು ನಂಬಲು ನೀವು ಅವರಿಗೆ ಅವಕಾಶ ನೀಡುವುದು ಮುಖ್ಯ. ಶಮಿ ಅವರು ಆರು ಯಾರ್ಕರ್‌ಗಳಿಗೆ ಹೋಗಬೇಕೆಂದು ಬಯಸಿದ್ದರು. ಅವರು ನಮಗೆ ಅದ್ಭುತವಾಗಿದ್ದಾರೆ. ಹಿರಿಯ ಆಟಗಾರರಿಂದ ನಾವು ಮೇಲುಗೈ ಸಾಧಿಸಿರುವುದು ಮುಖ್ಯ. ನಾವು ಇನ್ನೂ ಒಂದು ಸಮಯದಲ್ಲಿ ಮತ್ತೊಂದು ಪಂದ್ಯವನ್ನು ತೆಗೆದುಕೊಳ್ಳಲು ಬಯಸುತ್ತೇವೆ ಮತ್ತು ಮೊದಲ ಏಳರಲ್ಲಿ ನೀವು ಸಾಕಷ್ಟು ಜಯಗಳಿಸದಿದ್ದಾಗ, ಪ್ರತಿ ಗೆಲುವು ಸಿಹಿಯಾಗಿರುತ್ತದೆ,"ಎಂದು ನಾಯಕ ಸೇರಿಸಲಾಗಿದೆ," ಎಂದು ನಾಯಕ ಕೆ.ಎಲ್‌ ರಾಹುಲ್‌ ತಿಳಿಸಿದರು.

ಆಡಿರುವ ಒಂಬತ್ತು ಪಂದ್ಯಗಳಿಂದ ಆರು ಅಂಕಗಳನ್ನು ಕಲೆ ಹಾಕಿರುವ ಕಿಂಗ್ಸ್ ಇಲೆವೆನ್‌ ಪಂಜಾಬ್‌ 6ನೇ ಸ್ಥಾನದಲ್ಲಿದೆ. ಮಂಗಳವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com