'ರಾಕ್ ಸ್ಟಾರ್', ಎಂಎಸ್‌ಡಿ, 'ತಹೆರ್ ಶಾ': ನೆಟಿಗರ ಗಮನ ಸೆಳೆದ ಉದ್ದನೆಯ ಕೂದಲಿನ ಅಂಪೈರ್, ಯಾರಿವರು?

ತಮ್ಮ ವಿಚಿತ್ರ ಆ್ಯಕ್ಷನ್ ಗಳ ಮೂಲಕ ಮೈದಾನದಲ್ಲಿ ಅಂಪೈರ್ ಗಳು ಗಮನ ಸೆಳೆಯುವುದನ್ನು ನೋಡಿದ್ದೇವೆ. ಆದರೆ ಐಪಿಎಲ್ 13ನೇ ಆವೃತ್ತಿಯಲ್ಲಿ ಅಂಪೈರ್ ಒಬ್ಬರು ತಮ್ಮ ಉದ್ದನೆಯ ಕೂದಲಿನ ಮೂಲಕ ನೆಟಿಗರ ಗಮನ ಸೆಳೆದಿದ್ದರು. 
ಪಶ್ಚಿಮ್ ಪಾಠಕ್
ಪಶ್ಚಿಮ್ ಪಾಠಕ್

ಅಬು ದುಬೈ: ತಮ್ಮ ವಿಚಿತ್ರ ಆ್ಯಕ್ಷನ್ ಗಳ ಮೂಲಕ ಮೈದಾನದಲ್ಲಿ ಅಂಪೈರ್ ಗಳು ಗಮನ ಸೆಳೆಯುವುದನ್ನು ನೋಡಿದ್ದೇವೆ. ಆದರೆ ಐಪಿಎಲ್ 13ನೇ ಆವೃತ್ತಿಯಲ್ಲಿ ಅಂಪೈರ್ ಒಬ್ಬರು ತಮ್ಮ ಉದ್ದನೆಯ ಕೂದಲಿನ ಮೂಲಕ ನೆಟಿಗರ ಗಮನ ಸೆಳೆದಿದ್ದರು. 

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಪಶ್ಚಿಮ್ ಪಾಠಕ್ ಮೈದಾನದ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ನೆಟಿಗರು ಅವರು ಯಾರಿರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಶೋಧ ನಡೆಸಿದ್ದರು. ಒಬ್ಬರು ರಾಕ್ ಸ್ಟಾರ್ ಎಂದು ಕರೆದರೆ, ಮತ್ತೊಬ್ಬರು ಎಂಎಸ್ ಧೋನಿ, ಇನ್ನು ಕೆಲವರು ಪಾಕ್ ಗಾಯಕ ತಹೆರ್ ಶಾ ಎಂದು ಬಣ್ಣಿಸಿದ್ದಾರೆ. 

ಪಂದ್ಯದ ವೇಳೆ ಅಂಪೈರ್ ಪಾಠಕ್ ಅವರು ತಮ್ಮ ಉದ್ದನೆಯ ಕೂದಲನ್ನು ಬಿಚ್ಚಿದ್ದರು. ಇನ್ನು ಸನ್ ಗ್ಲಾಸ್ ದರಿಸಿದ್ದರಿಂದ ವಿಭಿನ್ನವಾಗಿ ಕಾಣುತ್ತಿದ್ದರು. ಇನ್ನು ಇನ್ನಿಂಗ್ಸ್ ಉದ್ದಕ್ಕೂ ಎದ್ದು ಕಾಣುತ್ತಿದ್ದರು. ಇನ್ನು ಅಂಪೈರ್ ಅವರ ಪೂರ್ವಪರ ತಿಳಿಯುವ ಸಲುವಾಗಿ ನೆಟಿಗರು ಸಾಮಾಜಿಕ ಜಾಲತಾಣವನ್ನು ಜಾಲಾಡಿದ್ದು ತಲಾ ಒಂದು ಹೆಸರಿನಿಂದ ಗುರುತಿಸಿದ್ದಾರೆ. 

ಐಪಿಎಲ್ 13ನೇ ಆವೃತ್ತಿಯಲ್ಲಿ ಪಾಠಕ್ ಅವರಿಗೆ ಇದು ಮೊದಲ ಪಂದ್ಯವಾಗಿದೆ. ಆದರೆ ಅವರಿಗೆ ಅಂಪೈರಿಂಗ್ ಹೊಸತೆನಲ್ಲ. ಒಂದು ದಶಕದ ಅನುಭವನನ್ನು ಹೊಂದಿದ್ದಾರೆ. ಇನ್ನು 2014 ಮತ್ತು 2015ರ ಐಪಿಎಲ್ ಆವೃತ್ತಿಯಲ್ಲೂ ಕ್ರಮವಾಗಿ ನಾಲ್ಕು ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು. 

ಮುಂಬೈಗೆ ಸೇರಿದ 43 ವರ್ಷದ ಪಾಠಕ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನ ಅನುಭವವನ್ನೂ ಹೊಂದಿದ್ದಾರೆ. 2012ರಲ್ಲಿ ಎರಡು ಮಹಿಳಾ ಏಕದಿನ ಪಂದ್ಯಗಳು ಹಾಗೂ ಭಾರತದಲ್ಲಿ ಮೂರು ಏಕದಿನ ಪಂದ್ಯಗಳಿಗೆ ಮೀಸಲು ಅಂಪೈರ್ ಆಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com