ಪಿಸಿಬಿ ಸಿಇಒ ವಾಸಿಮ್ ಖಾನ್‍ 'ಅಜ್ಞಾನಿ' ಎಂದ ಬಿಸಿಸಿಐ!

ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್‌ ಟೂರ್ನಿಗೆ ನಮ್ಮ ಆಟಗಾರರು ವೀಸಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಆಂತಕ ವ್ಯಕ್ತಪಡಿಸಿ ಆ ಮೂಲಕ ವಿವಾದವನ್ನು ಎಬ್ಬಿಸಲು ಮುಂದಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸಿಇಒ ಅವರನ್ನು ಬಿಸಿಸಿಐ ಅಜ್ಞಾನಿ ಎಂದು ಕರೆದಿದೆ. 
ವಾಸಿಮ್ ಖಾನ್
ವಾಸಿಮ್ ಖಾನ್

ದುಬೈ: ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್‌ ಟೂರ್ನಿಗೆ ನಮ್ಮ ಆಟಗಾರರು ವೀಸಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಆಂತಕ ವ್ಯಕ್ತಪಡಿಸಿ ಆ ಮೂಲಕ ವಿವಾದವನ್ನು ಎಬ್ಬಿಸಲು ಮುಂದಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸಿಇಒ ಅವರನ್ನು ಬಿಸಿಸಿಐ ಅಜ್ಞಾನಿ ಎಂದು ಕರೆದಿದೆ. 

2021ರ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವ ಪಾಕಿಸ್ತಾನ ಆಟಗಾರರು ವೀಸಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಪಿಸಿಬಿ ಸಿಇಒ ವಾಸಿಮ್ ಖಾನ್ ಆತಂಕ ವ್ಯಕಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ವಾಸಿಮ್ ಖಾನ್ ತಿಳುವಳಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಐಸಿಸಿ ನಿಯಮಗಳ ಪ್ರಕಾರ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಮಂಡಳಿಯೊಂದಿಗಿನ ಒಪ್ಪಂದದ ಪ್ರಕಾರ ವೀಸಾ ನೀಡಲಾಗುವುದು ಭಾರತದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸ್ಪಷ್ಟಪಡಿಸಿದೆ.

ಎಎನ್‌ಐ ಜೊತೆ ಮಾತನಾಡಿದ ಐಸಿಸಿ ವಕ್ತಾರರು, ಎಲ್ಲಾ ತಂಡಗಳಿಗೆ ವೀಸಾ ನೀಡಲಾಗುವುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪಂದ್ಯಾವಳಿಯ ಯೋಜನೆಯನ್ನು ರೂಪಿಸಲಾಗುತ್ತದೆ. "ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ಸೇರಿದಂತೆ ಎಲ್ಲಾ ಐಸಿಸಿ ಈವೆಂಟ್‌ಗಳಿಗೆ ಆತಿಥೇಯ ಒಪ್ಪಂದವು ಎಲ್ಲಾ ಸ್ಪರ್ಧಾತ್ಮಕ ತಂಡಗಳಿಗೆ ವೀಸಾಗಳನ್ನು ಒದಗಿಸುವುದನ್ನು ಆತಿಥೇಯ ಸದಸ್ಯರು ಖಚಿತಪಡಿಸಿಕೊಳ್ಳುತ್ತಾರೆ. ಭಾರತದಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಯೋಜನೆ ಆ ಆಧಾರದ ಮೇಲೆ ನಡೆಯುತ್ತಿದೆ ವಕ್ತಾರರು ತಿಳಿಸಿದ್ದಾರೆ. 

ಖಾನ್ ಅಜ್ಞಾನಿ ಎಂದು ತೋರುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಪಿಸಿಬಿ ಸಿಇಒ ಅವರ ಹೇಳಿಕೆಯು ಅಜ್ಞಾನದಿಂದ ಹುಟ್ಟಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಐಸಿಸಿ ನಿಯಮದಂತೆ ಭಾಗವಹಿಸುವ ಎಲ್ಲಾ ತಂಡಗಳಿಗೂ ವೀಸಾ ನೀಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com