ಪ್ರೀತಿ ಜಿಂಟಾ
ಪ್ರೀತಿ ಜಿಂಟಾ

ಕೋವಿಡ್-19 ಟೆಸ್ಟ್ ಕ್ವೀನ್: 20ನೇ ಬಾರಿಗೆ ಕೊರೋನಾ ಟೆಸ್ಟ್‌ ಮಾಡಿಸಿದ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀಚಿ ಜಿಂಟಾ ಅವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ಎಕ್ಸ್ ಪೆರ್ಟ್ ಆಗಿದ್ದು, 35 ದಿನಗಳಲ್ಲಿ 20ನೇ ಬಾರಿ ಕರೋನಾ ಟೆಸ್ಟ್ ಮಾಡಿಸಿದ್ದಾರೆ.

ದುಬೈ: ಬಾಲಿವುಡ್ ನಟಿ ಪ್ರೀಚಿ ಜಿಂಟಾ ಅವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ಎಕ್ಸ್ ಪೆರ್ಟ್ ಆಗಿದ್ದು, 35 ದಿನಗಳಲ್ಲಿ 20ನೇ ಬಾರಿ ಕರೋನಾ ಟೆಸ್ಟ್ ಮಾಡಿಸಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕರಾಗಿರುವ ಪ್ರೀತಿ ಜಿಂಟಾ ಅವರು ತಂಡದೊಂದಿಗೆ ಇದ್ದಾರೆ. 

ಪ್ರತಿ ಪಂದ್ಯದಲ್ಲೂ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡವನ್ನ ಹುರಿದುಂಬಿಸುತ್ತಿರುವ ಪ್ರೀತಿ ಜಿಂಟಾ ಅವರು, 20ನೇ ಬಾರಿಗೆ ಕೋವಿಡ್-19 ಟೆಸ್ಟ್ ಮಾಡಿಸಿರುವುದಾಗಿ ತಮ್ಮ ಇನ್‌ಸ್ಟಾಗ್ರಾಮ್‌ ವೀಡಿಯೋದಲ್ಲಿ ತಿಳಿಸಿದ್ದಾರೆ.

ನನ್ನದು 20ನೇ ಕೋವಿಡ್-19 ಪರೀಕ್ಷೆ ಎಂದಿರುವ ಪ್ರೀತಿ ಜಿಂಟಾ, ಈ ಮೂಲಕ ತಾನು ಕೋವಿಡ್ ಟೆಸ್ಟ್ ಕ್ವೀನ್ ಆಗಿರುವುದಾಗಿ ಬಣ್ಣಿಸಿದ್ದಾರೆ.

ಪ್ರೀತಿ ಜಿಂಟಾ ದುಬೈ ತಲುಪುವ ಮೊದಲಿನಿಂದ ಈವರೆಗೆ ಒಟ್ಟು 20 ಬಾರಿ ಕರೋನಾ ಪರೀಕ್ಷೆಗೆ ಒಳಪಟ್ಟಿದ್ದಾರಂತೆ. ಪ್ರತಿ ಬಾರಿಯೂ ಫಲಿತಾಂಶ ನೆಗೆಟಿವ್  ಬಂದಿರುವುದು ಖುಷಿಯ ವಿಚಾರ ಎಂದಿದ್ದಾರೆ. ಪ್ರೀತಿ ತಮಗೆ ಕರೋನಾ ಟೆಸ್ಟ್ ಮಾಡುತ್ತಿರುವ ವೈದ್ಯರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇವರು ಕೊರೋನಾವನ್ನು ಟೆಸ್ಟ್ ಮಾಡುವಲ್ಲಿ ಪರಿಣತರಾಗಿದ್ದಾರೆ. ಈವರೆಗೂ ಒಂದು ಬಾರಿಯೂ ನನಗೆ ನೋಯಿಸಿಲ್ಲ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com