ಐಪಿಎಲ್-2020 ಕೆಕೆಆರ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಗೆಲುವಿನ ಕೇಕೆ

ಐಪಿಎಲ್-2020 ರ 39 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ. 

Published: 21st October 2020 10:30 PM  |   Last Updated: 21st October 2020 10:52 PM   |  A+A-


IPL-2020: RCB beat KKR by 8 wickets

ಐಪಿಎಲ್-2020 ಕೆಕೆಆರ್ ವಿರುದ್ಧ ಆರ್ ಸಿಬಿ ಗೆಲುವಿನ ಕೇಕೆ

Posted By : Srinivas Rao BV
Source : Online Desk

ಐಪಿಎಲ್-2020 ರ 39 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ. 

ಕೆಕೆಆರ್ ನೀಡಿದ್ದ ಅತ್ಯಂತ ಕಡಿಮೆ 84 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಅತ್ಯಂತ ಸುಲಭವಾಗಿ ಈ ಪಂದ್ಯವನ್ನು ಗೆದ್ದುಕೊಂಡಿದೆ. 

ಆರಂಭಿಕ ಆಟಗಾರರಾದ ದೇವ್ ದತ್ತ ಪಡೀಕಲ್ ಅರೋನ್ ಫಿಂಚ್ ಉತ್ತಮ ಆರಂಭವನ್ನೇ ತಂಡಕ್ಕೆ ನೀಡಿದರು ಆದರೆ ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯಲಿಲ್ಲ. ನಂತರ ಜೊತೆಯಾದ ಗುರ್ಕೀರತ್ ಸಿಂಗ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಸೋಲಿನ ಮೂಲಕ ಕೆಕೆಆರ್ ನ ಪ್ಲೇ ಆಫ್ ಕನಸು ಬಹುತೇಕ ಭಗ್ನಗೊಂಡಂತೆಯೇ ಆಗಿದೆ. 

ಇನ್ನು ಆರ್ ಸಿಬಿ ಈ ಪಂದ್ಯದ ಗೆಲುವಿನ ಮೂಲಕ 12 ಪಾಯಿಂಟ್ ಗಳನ್ನು ಪಡೆದಿದ್ದು ಮುಂಬೈ ತಂಡಕ್ಕೆ ಸಮಬಲ ಕಾಯ್ದುಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 6 ಗೆದ್ದಿದ್ದು 3 ಪಂದ್ಯಗಳನ್ನು ಗೆದ್ದಿದೆ.  ಐಪಿಎಲ್-2020 ಯಲ್ಲಿ ಡೆಲ್ಲಿ ತಂಡ ಮುಂಚೂಣಿಯಲ್ಲಿದೆ.

Stay up to date on all the latest ಕ್ರಿಕೆಟ್ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp