ಲಂಕಾ ಪ್ರಿಮಿಯರ್ ಲೀಗ್‌ನ ಫ್ರಾಂಚೈಸಿ 'ಕ್ಯಾಂಡಿ ಟಸ್ಕರ್ಸ್' ಖರೀದಿಸಿದ ಸೋಹೈಲ್ ಖಾನ್!

ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿ ಗುರುತಿಸಿಕೊಂಡಿರುವ ಸೋಹೈಲ್ ಖಾನ್ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ನ ಫ್ರಾಂಚೈಸಿಯೊಂದನ್ನು ಖರೀದಿಸಿದ್ದಾರೆ.

Published: 21st October 2020 05:28 PM  |   Last Updated: 21st October 2020 05:56 PM   |  A+A-


salman khan-sohail khan

ಸಲ್ಮಾನ್ ಖಾನ್-ಸೊಹೈಲ್ ಖಾನ್

Posted By : Vishwanath S
Source : ANI

ಕೊಲಂಬೊ: ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿ ಗುರುತಿಸಿಕೊಂಡಿರುವ ಸೋಹೈಲ್ ಖಾನ್ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ನ ಫ್ರಾಂಚೈಸಿಯೊಂದನ್ನು ಖರೀದಿಸಿದ್ದಾರೆ.

ನವೆಂಬರ್ 21ರಿಂದ ಎಲ್‌ಪಿಎಲ್ ಪ್ರಾರಂಭವಾಗಲಿದ್ದು ಸೋಹೈಲ್ ಖಾನ್ ಕ್ಯಾಂಡಿ ಫ್ರಾಂಚೈಸಿ ಮಾಲೀಕರಾಗಿದ್ದಾರೆ. 

ಕ್ಯಾಂಡಿ ಟಸ್ಕರ್ಸ್ ತಂಡದಲ್ಲಿ ಸ್ಥಳೀಯ ಕ್ರಿಕೆಟಿಗ ಕುಸಾಲ್ ಪೆರೆರಾ, ಕುಸಲ್ ಮೆಂಡಿಸ್, ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್, ನುವಾನ್ ಪ್ರದೀಪ್ ಮತ್ತು ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ತಂಡದಲ್ಲಿದ್ದಾರೆ. 

"ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಸಾಕಷ್ಟು ಸಾಮರ್ಥ್ಯಗಳಿವೆ. ಈ ರೋಮಾಂಚಕಾರಿ ಟೂರ್ನಿಯ ಭಾಗವಾಗಲು ನಮಗೆ ತುಂಬಾ ಸಂತೋಷವಾಗಿದೆ. ಶ್ರೀಲಂಕಾದ ಅಭಿಮಾನಿಗಳು ಆಟದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ತಂಡವನ್ನು ಬೆಂಬಲಿಸಲು ಅವರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಸೊಹೈಲ್ ಖಾನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕ್ರಿಸ್ ಗೇಲ್ ನಿಸ್ಸಂಶಯವಾಗಿ ಯುನಿವರ್ಸಲ್ ಬಾಸ್, ಆದರೆ ಅವರು ಒಬ್ಬಂಟಿಯಾಗಿಲ್ಲ, ನಮ್ಮಲ್ಲಿ ಉತ್ತಮ ತಂಡವಿದೆ. ಯುವಕರ ಮತ್ತು ಅನುಭವಿಗಳ ಉತ್ತಮ ಸಮತೋಲನವಿದೆ. ಫೈನಲ್ ಗೇರುವ ಸಾಮರ್ಥ್ಯ ತಂಡಕ್ಕಿದೆ ಎಂದು ನಟ ಹೇಳಿದರು.

ಶ್ರೀಲಂಕಾದ ಮಾಜಿ ನಾಯಕ ಹಶನ್ ತಿಲಕರತ್ನ ಅವರು ಕ್ಯಾಂಡಿ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ.

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp