ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ, ಟೂರ್ನಿ ಭಾಗಶಃ ಯಶಸ್ವಿ: ಸೌರವ್ ಗಂಗೂಲಿ

ಯುನೈಟೆಡ್ ಅರಬ್ ಎಮಿರೇಟ್ಸ್ ನ ಮೂರು ಕ್ರೀಡಾಂಗಣಗಳಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಐಪಿಎಲ್ ಟೂರ್ನಮೆಂಟ್ ನಡೆಯುತ್ತಿದ್ದರೂ (ಅಭಿಮಾನಿಗಳಿಗೆ ಪ್ರವೇಶವಿಲ್ಲದೆ), ವೀಕ್ಷಕರು ದಾಖಲೆಯ ಸಂಖ್ಯೆಗಳಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಗಂಗೂಲಿ
ಗಂಗೂಲಿ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ಮೂರು ಕ್ರೀಡಾಂಗಣಗಳಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಐಪಿಎಲ್ ಟೂರ್ನಮೆಂಟ್ ನಡೆಯುತ್ತಿದ್ದರೂ(ಅಭಿಮಾನಿಗಳಿಗೆ ಪ್ರವೇಶವಿಲ್ಲದೆ), ವೀಕ್ಷಕರು ದಾಖಲೆಯ ಸಂಖ್ಯೆಗಳಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿ ಸೆಪ್ಟೆಂಬರ್ 19 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಪ್ರಾರಂಭವಾಯಿತು ಮತ್ತು ಅಂದಿನಿಂದ ಇಲ್ಲಿಯವರೆಗೆ ಅದ್ಭುತ ಪಯಣ ಮುಂದುವರಿದಿದೆ. 

ಐಪಿಎಲ್ 2020 ಈ ಮಟ್ಟಿಗೆ ದೊಡ್ಡ ರೇಟಿಂಗ್ ತಂದುಕೊಡುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಆದರೆ ಕೊನೆಯ ಕ್ಷಣದವರೆಗೂ ಈ ವರ್ಷ ಐಪಿಎಲ್‌ನೊಂದಿಗೆ ಮುಂದುವರಿಯುವುದು ಅವರಿಗೆ ಅಕ್ಷರಶಃ ಖಚಿತವಾಗಿರಲಿಲ್ಲ ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ.

ಕೊರೋನಾ ಹಿನ್ನಲೆಯಲ್ಲಿ ಟೂರ್ನಿ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ನಾವು ನಂಬಿ ಮುಂದೆ ಹೋದೆವು. ಜೀವನವು ಸಹಜ ಸ್ಥಿತಿಗೆ ಮರಳಬೇಕು ಎಂದು ನಾವು ಭಾವಿಸಿದ್ದೇವೆ. ಮತ್ತೆ ಕ್ರೀಡೆಗಳು ಹಿಂತಿರುಗಬೇಕೆಂದು ನಾವು ಬಯಸಿದ್ದೇವೆ ಎಂದರು. 

ಐಪಿಎಲ್ ಟೂರ್ನಿಗೆ ವೀಕ್ಷಕರ ಪ್ರತಿಕ್ರಿಯೆಯಿಂದ ನನಗೆ ಆಶ್ಚರ್ಯವಿಲ್ಲ. ಇದು ವಿಶ್ವದ ಅತ್ಯುತ್ತಮ ಪಂದ್ಯವಾಳಿ. ಪಂದ್ಯಾವಳಿಯನ್ನು ವೀಕ್ಷಿಸುತ್ತಿರುವ ಜನರ ಸಂಖ್ಯೆಯಿಂದ ರೇಟಿಂಗ್ ಗಳ ದೃಷ್ಟಿಯಿಂದ ಐಪಿಎಲ್ ಯಶಸ್ಸನ್ನು ಸಾಧಸುತ್ತಿದೆ ಎಂದು ಸೌರವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com