ಮತ್ತೆ ಗಾಲ್ಫ್ ಆಡಲು ಕಾಯುತ್ತಿರುವೆ: ಆ್ಯಂಜಿಯೋಪ್ಲಾಸ್ಟಿ ನಂತರ ಕಪಿಲ್ ದೇವ್ ಉತ್ಸಾಹ!

ಎದೆ ನೋವಿನ ಕಾರಣ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿರುವ ದೇಶದ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಆರೋಗ್ಯ ಚೇತರಿಸಿಕೊಳ್ಳುತ್ತಿರುವಂತೆಯೇ, ಮತ್ತೆ ಗಾಲ್ಫ್ ಆಡಲು ಕಾಯುತ್ತಿದ್ದಾರೆ.
ಕಪಿಲ್ ದೇವ್
ಕಪಿಲ್ ದೇವ್

ನವದೆಹಲಿ: ಎದೆ ನೋವಿನ ಕಾರಣ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿರುವ ದೇಶದ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಆರೋಗ್ಯ ಚೇತರಿಸಿಕೊಳ್ಳುತ್ತಿರುವಂತೆಯೇ, ಮತ್ತೆ ಗಾಲ್ಫ್ ಆಡಲು ಕಾಯುತ್ತಿದ್ದಾರೆ.

1983 ರ ವಿಶ್ವಕಪ್ ವಿಜೇತ ಭಾರತ ತಂಡದ ವಾಟ್ಸಾಪ್ ಗುಂಪೊಂದು ಇದೆ. ಗುಂಪಿನ ಸದಸ್ಯರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅದರಲ್ಲಿ ಹಂಚಿಕೊಳ್ಳಲಾಗುತ್ತದೆ.  61 ರ ಹರೆಯದ ಕಪಿಲ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಮಾಜಿ ಇಂಡಿಯಾ ಆಟಗಾರರು ಹಾರೈಸಿದ್ದಾರೆ .ಇದಕ್ಕೆ ಅವರು ನೀಡಿರುವ ಪ್ರತಿಕ್ರಿಯೆ, ಆರೋಗ್ಯದಿಂದ ಇದ್ದಾರೆ ಎಂಬುದನ್ನು ತಿಳಿಸಿದೆ. 

ನಾನು ಉತ್ತಮ ಮನೋಭಾವ, ಚೆನ್ನಾಗಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಗಾಲ್ಫ್ ಪಂದ್ಯಕ್ಕೆ ಮರಳಲು ಕಾಯಲು ಆಗುತ್ತಿಲ್ಲ. ನೀವು ನನ್ನ ಕುಟುಂಬವಿದ್ದಂತೆ ಎಂದು ಹೇಳಿ ಕಪಿಲ್ ದೇವ್ ಧನ್ಯವಾದ ಹೇಳಿದ್ದಾರೆ.

ವಿಶಾಲ ಮನೋಭಾವ ಹೊಂದಿರುವ ಕಪಿಲ್ ದೇವ್ ಶೀಘ್ರ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೊದಲ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಆಟಗಾರರೊಬ್ಬರು ತಿಳಿಸಿದ್ದಾರೆ.

ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 1 ಗಂಟೆ ಸುಮಾರಿನಲ್ಲಿ ದೆಹಲಿಯ ಪೋರ್ಟಿಸ್ ಎಸ್ ಕಾರ್ಟ್ಸ್ ಹೃದ್ರೋಗ ಆಸ್ಪತ್ರೆಗೆ ಕಪಿಲ್ ದೇವ್ ದಾಖಲಾಗಿದ್ದಾರೆ. ಸದ್ಯ ಅವರು ಆರೋಗ್ಯದಿಂದ ಇದ್ದು, ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com