ಐಪಿಎಲ್ 2020: ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಆರ್‌ಸಿಬಿ, ಕಾರಣ ಇಲ್ಲಿದೆ!

ಪ್ರಸಕ್ತ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡ ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಆರ್ ಸಿಬಿ ತಂಡ
ಆರ್ ಸಿಬಿ ತಂಡ

ದುಬೈ: ಪ್ರಸಕ್ತ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡ ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. 

ಪ್ರತಿ ವರ್ಷ ಪರಿಸರದ ಜಾಗೃತಿ ಮೂಡಿಸುವ ಸಲುವಾಗಿ ಆರ್ ಸಿಬಿ ಹಸಿರು ಜೆರ್ಸಿ ತೊಡುವ ಮೂಲಕ ಗೋ ಗ್ರೀನ್ ಅಭಿಯಾನಕ್ಕೆ ಒತ್ತು ನೀಡುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿ ದುಬೈ ನಲ್ಲಿ ನಡೆಯುತ್ತಿದ್ದು ಅಕ್ಟೋಬರ್ 25ರಂದು ಆರ್ ಸಿಬಿ ಚೆನ್ನೈ ವಿರುದ್ಧ ಸೆಣೆಸಲಿದೆ. ಇದೇ ಸಂದರ್ಭದಲ್ಲಿ ಆರ್ ಸಿಬಿ ಹಸಿರು ಜೆರ್ಸಿ ತೊಡಲಿದೆ. 

ಈ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಆರ್ ಸಿಬಿ ಹಸಿರು ಜೆರ್ಸಿ ತೊಟ್ಟು ಅಖಾಡಕ್ಕೆ ಇಳಿಯುತ್ತಿತ್ತು. ಆದರೆ ಪ್ರಸಕ್ತ ವರ್ಷ ದುಬೈನಲ್ಲಿ ನಡೆಯುತ್ತಿರುವುದರಿಂದ ಗೋ ಗ್ರೀನ್ ಪಂದ್ಯ ಅಲ್ಲಿ ನಡೆಯಲಿದೆ. 

ಗೋ ಗ್ರೀನ್ ಪಂದ್ಯದ ಕುರಿತು ಆರ್ ಸಿಬಿ ತನ್ನ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಹಾಗೂ ವಾಷ್ಟಿಂಗನ್ ಸುಂದರ್ ಪರಿಸರ ರಕ್ಷಣೆಯ ಮಹತ್ವದ ಕುರಿತು ಸಂದೇಶ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com