ಐಪಿಎಲ್ ನಾಕೌಟ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ನಾಕೌಟ್ ಪಂದ್ಯ, ಫೈನಲ್ ಪಂದ್ಯದ  ದಿನಾಂಕ ಮತ್ತು ಸ್ಥಳಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. 
ಐಪಿಎಲ್ ನಾಕೌಟ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ನಾಕೌಟ್ ಪಂದ್ಯ, ಫೈನಲ್ ಪಂದ್ಯದ  ದಿನಾಂಕ ಮತ್ತು ಸ್ಥಳಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. 

ಪ್ಲೇಆಫ್ ಮತ್ತು ಫೈನಲ್ ಪಂದ್ಯವು ನವೆಂಬರ್ 5-10ರ ನಡುವೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. . ನವೆಂಬರ್ 10 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಫೈನಲ್ ಪಂದ್ಯವನ್ನು ಆಯೋಜಿಸುವುದರೊಂದಿಗೆ ಐಪಿಎಲ್ 2020 ಮುಕ್ತಾಯಗೊಳ್ಳಲಿದೆ.

"ಡ್ರೀಮ್ 11 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್ ಮತ್ತು ಫೈನಲ್ 2020 ರ ನವೆಂಬರ್ 5 ರಿಂದ ನವೆಂಬರ್ 10 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಕ್ವಾಲಿಫೈಯರ್ 1 ನವೆಂಬರ್ 5 ರಂದು ದುಬೈನಲ್ಲಿ ನಡೆಯಲಿದೆ ಮತ್ತು ನಂತರ ಎಲಿಮಿನೇಟರ್ (ನವೆಂಬರ್ 6) ಮತ್ತು ಕ್ವಾಲಿಫೈಯರ್ 2 (ನವೆಂಬರ್ 8) ಅಬುಧಾಬಿಯಲ್ಲಿ.ನಡೆಯಲಿದ್ದು ನವೆಂಬರ್ 10 ರಂದು ಫೈನಲ್ಸ್ ಹಣಾಹಣಿ ದುಬೈನಲ್ಲಿ ನಡೆಯಲಿದೆ ”ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಐಪಿಎಲ್ 2020 ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಎಲ್ಲಾ ಮೂರು ತಂಡಗಳು ತಮ್ಮ  ತಮ್ಮ ಸಾಲಿನಲ್ಲಿ  14 ಪಾಯಿಂಟ್‌ಗಳನ್ನು ಹೊಂದಿವೆ ಆದರೆ ಅವುಗಳ ನೆಟ್ ರನ್ ರೇಟ್ ಗಳಿಂದ  ಪ್ಲೇಆಫ್ ಸ್ಥಾನವನ್ನು ಪಡೆದುಕೊಳ್ಳಲು  ಸಾಧ್ಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com