ಐಪಿಎಲ್ 2020: ಆರ್ ಸಿಬಿ ಮಣಿಸಿದ ಚೆನ್ನೈ, ಪ್ಲೇಆಫ್ ಆಸೆ ಇನ್ನೂ ಜೀವಂತ

ರುತುರಾಜ್ ಗಾಯಕ್ವಾಡ್(ಅಜೇಯ 59 ರನ್, 50 ಎಸೆತ) ಮತ್ತು ಅಂಬಾಟಿ ರಾಯುಡು(39 ರನ್ , 27 ಎಸೆತ) ಅವರ ಅದ್ಭುತ ಬ್ಯಾಟಿಂಗ್ ಜತೆಗೆ ಬೌಲರ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ...
ರುತುರಾಜ್ ಗಾಯಕ್ವಾಡ್ - ಎಂಎಸ್ ಧೋನಿ
ರುತುರಾಜ್ ಗಾಯಕ್ವಾಡ್ - ಎಂಎಸ್ ಧೋನಿ

ದುಬೈ: ರುತುರಾಜ್ ಗಾಯಕ್ವಾಡ್(ಅಜೇಯ 59 ರನ್, 50 ಎಸೆತ) ಮತ್ತು ಅಂಬಾಟಿ ರಾಯುಡು(39 ರನ್ , 27 ಎಸೆತ) ಅವರ ಅದ್ಭುತ ಬ್ಯಾಟಿಂಗ್ ಜತೆಗೆ ಬೌಲರ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 13ನೇ ಆವೃತ್ತಿಯ 44ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತು.

ಆರ್ ಸಿಬಿಯ 145 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ 8 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಜಯದ ನಗೆ ಬೀರಿತು.

ರುತುರಾಜ್ ಅವರು ಎರಡು ಸಿಕ್ಸರ್, ಮೂರು ಬೌಂಡರಿಯೊಂದಿಗೆ ಐಪಿಎಲ್​​ನ ಮೊದಲ ಅರ್ಧಶತಕ ಪೂರೈಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಧೋನಿ ಉತ್ತಮ ಆಟ ಪ್ರದರ್ಶಿಸಿದರು. ಅದರಂತೆ 18. 4 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com