ಆರ್‌ಸಿಬಿಗೆ ಆಘಾತ: ವೇಗಿ ನವದೀಪ್ ಸೈನಿಗೆ ಗಾಯ, ಮುಂದಿನ ಪಂದ್ಯಕ್ಕೆ ಅನುಮಾನ

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ವೇಗದ ಬೌಲರ್ ನವದೀಪ್ ಸೈನಿ ಗಾಯಗೊಂಡಿದ್ದು, ಮುಂದಿನ ಪಂದ್ಯದಲ್ಲಿ ಅವರು ಆಡುವುದು ಅನುಮಾನಾಸ್ಪದವಾಗಿದೆ.

Published: 26th October 2020 07:53 PM  |   Last Updated: 26th October 2020 07:53 PM   |  A+A-


Navdeep Saini

ನವದೀಪ್ ಸೈನಿ

Posted By : Vishwanath S
Source : UNI

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ವೇಗದ ಬೌಲರ್ ನವದೀಪ್ ಸೈನಿ ಗಾಯಗೊಂಡಿದ್ದು, ಮುಂದಿನ ಪಂದ್ಯದಲ್ಲಿ ಅವರು ಆಡುವುದು ಅನುಮಾನಾಸ್ಪದವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೈನಿ ಬಲಗೈಗೆ ಪೆಟ್ಟು ಬಿದ್ದು, ಅಕ್ಟೋಬರ್ 28ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಇವರು ಆಡುವುದು ಅನುಮಾನ ಎನ್ನಲಾಗಿದೆ. 

ಚೆನ್ನೈ ವಿರುದ್ಧದ ಪಂದ್ಯದ ಇನ್ನಿಂಗ್ಸ್‌ನ 18ನೇ ಓವರ್‌ನ ಕೊನೆಯ ಎಸೆತದಲ್ಲಿ ಬ್ಯಾಟ್ಸ್‌ಮನ್ ಹೊಡೆತವನ್ನು ನಿಲ್ಲಿಸಲು ಮುಂದಾಗಿ ಸೈನಿ ಗಾಯಗೊಂಡರು, ನಂತರ ಅವರು ಮೈದಾನದಿಂದ ಹೊರ ನಡೆದಿದ್ದರು.

ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇನ್ನು 11 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Stay up to date on all the latest ಕ್ರಿಕೆಟ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp