ಐಪಿಎಲ್ 2020: ಗೆಲುವಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದ ರಾಹುಲ್‌ ಬಳಗ

ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಕ್ರಿಸ್ ಗೇಲ್‌ ಅವರನ್ನು ಶ್ಲಾಘಿಸಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌, ವೆಸ್ಟ್‌ ಇಂಡೀಸ್‌ ಎಡಗೈ ಬ್ಯಾಟ್ಸ್‌ಮನ್‌ನಿಂದ ಯಾವಾಗಲೂ ಡ್ರೆಸ್ಸಿಂಗ್‌ ಕೊಠಡಿ ಲವಲವಿಕೆಯಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್
ಕಿಂಗ್ಸ್ ಇಲೆವೆನ್ ಪಂಜಾಬ್

ಶಾರ್ಜಾ: ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಕ್ರಿಸ್ ಗೇಲ್‌ ಅವರನ್ನು ಶ್ಲಾಘಿಸಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌, ವೆಸ್ಟ್‌ ಇಂಡೀಸ್‌ ಎಡಗೈ ಬ್ಯಾಟ್ಸ್‌ಮನ್‌ನಿಂದ ಯಾವಾಗಲೂ ಡ್ರೆಸ್ಸಿಂಗ್‌ ಕೊಠಡಿ ಲವಲವಿಕೆಯಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ.

ಕೆಕೆಆರ್‌ ನೀಡಿದ 150 ರನ್‌ಗಳ ಗುರಿಯನ್ನು ಪಂಜಾಬ್ ಇನ್ನೂ ಏಳು ಎಸೆತಗಳು ಹಾಗೂ ಎಂಟು ವಿಕೆಟ್‌ಗಳು ಬಾಕಿ ಇರುವಾಗಲೇ ಮುಟ್ಟಿತು. ಮಂದೀಪ್‌ ಸಿಂಗ್ ಹಾಗೂ ಕ್ರಿಸ್‌ ಗೇಲ್‌ ಕ್ರಮವಾಗಿ 66 ಮತ್ತು 51 ರನ್‌ಗಳನ್ನು ಗಳಿಸಿದರು.

ಈ ಗೆಲುವಿನೊಂದಿಗೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು ಹಾಗೂ ಸೋತ ಕೋಲ್ಕತಾ ನೈಟ್‌ ರೈಡರ್ಸ್ ಐದನೇ ಸ್ಥಾನಕ್ಕೆ ಜಾರಿತು.

ಪಂದ್ಯದ ಬಳಿಕ ಮಾತನಾಡಿದ ಕೆ.ಎಲ್‌ ರಾಹುಲ್‌, "ಆರಂಭಿಕ ಪಂದ್ಯಗಳಲ್ಲಿ ಕ್ರಿಸ್‌ ಗೇಲ್‌ ಅವರನ್ನು ಆಡಿಸದೇ ಇದ್ದದ್ದು ಕಠಿಣ ಕರೆಯಾಗಿತ್ತು. ಕಳೆದ ಏಳು-ಎಂಟು ವರ್ಷಗಳಲ್ಲಿ ಅವರು ವಿಭಿನ್ನ ಫ್ರಾಂಚೈಸಿಗಳಿಗಾಗಿ ಆಡುತ್ತಿರುವುದನ್ನು ನಾನು ನೋಡಿದ್ದೇನೆ. ಒಂದು ಅಥವಾ ಎರಡು ರನ್‌ಗಳಿಗೆ ಅವರು ಚೆನ್ನಾಗಿ ಓಡುತ್ತಾರೆ. ಅವರ ಉಪಸ್ಥಿತಿಯಿಂದ ಡ್ರೆಸ್ಸಿಂಗ್ ಕೊಠಡಿ ಯಾವಾಗಲೂ ಲವಲವಿಕೆಯಿಂದ ಕೂಡಿರುತ್ತದೆ. ಇಂದಿನ (ಸೋಮವಾರ) ಗೆಲುವಿನಿಂದ ತುಂಬಾ ಖಷಿಯಾಗಿದೆ ಹಾಗೂ ನಾಳೆ(ಮಂಗಳವಾರ)ಯೂ ಆನಂದಿಸುತ್ತೇವೆ ಮತ್ತು ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತೇವೆ," ಎಂದು ಹೇಳಿದರು.

ಕಳೆದ ಶುಕ್ರವಾರ ಮಂದೀಪ್‌ ಸಿಂಗ್‌ ತಮ್ಮ ತಂದೆಯನ್ನು ಕಳೆದುಕೊಂಡಿದ್ದರೂ ಅವರು ಪಂಜಾಬ್‌ ಫ್ರಾಂಚೈಸಿಗೆ ಆಡುತ್ತಿದ್ದಾರೆ. ಶನಿವಾರದ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ಅವರು, ಸೋಮವಾರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿ, "ಮಂದೀಪ್ ಸಿಂಗ್‌ ತೋರಿಸಿದ ಕಠಿಣತೆ ಇತರ ಮಾರ್ಗಗಳಿಗೆ ಸಹಕರಿಸಿದೆ. ಎಲ್ಲರೂ ಭಾವುಕರಾಗಿದ್ದಾರೆ. ಕೇವಲ ಕೈ ಎತ್ತುವುದು, ಅಲ್ಲಿಯೇ ಇರುವುದು, ಆಟವನ್ನು ಮುಗಿಸಿರುವುದು ನಮಗೆ ತುಂಬಾ ಹೆಮ್ಮೆ ತರುತ್ತದೆ," ಎಂದು ಹೇಳಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತಾ ನೈಟ್‌ ರೈಡರ್ಸ್ ಪರ ಅದ್ಭುತ ಬ್ಯಾಟಿಂಗ್‌ ಮಾಡಿದ ಶುಭಮನ್ ಗಿಲ್‌ 57 ರನ್‌ಗಳನ್ನು ಗಳಿಸುವ ಮೂಲಕ ತಂಡದ ಮೊತ್ತ 149 ದಾಖಲಿಸುವಲ್ಲಿ ನೆರವಾಗಿದ್ದರು. ಪಂಜಾಬ್‌ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ ಮೊಹಮ್ಮದ್ ಶಮಿ, ಮೂರು ವಿಕೆಟ್‌ಗಳನ್ನು ಪಡೆದರು ಹಾಗೂ ರವಿ ಬಿಷ್ಣೋಯ್ ಮತ್ತು ಕ್ರಿಸ್‌ ಜೋರ್ಡನ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

"ಅನಿಲ್‌ ಕುಂಬ್ಖೆ ಕೋಚ್‌ ಆಗಿ ಇದ್ದರೆ, ಇಬ್ಬರು ಲೆಗ್‌ ಸ್ಪಿನ್ನರ್‌ ಆಡುವುದರ ಬಗ್ಗೆ ಆಶ್ಚರ್ಯವಿಲ್ಲ. ಈ ಸಂಗತಿ ಅವರ ಮನಸ್ಸಿನಲ್ಲಿರುತ್ತದೆ. ಸ್ಪಿನ್ನರ್‌ಗಳಿಗೋಸ್ಕರ ಅವರು ಕಠಿಣ ಪರಿಶ್ರಮವನ್ನು ಪಡೆಯುತ್ತಾರೆ. ಅಲ್ಲದೆ, ಇದುವರೆಗೂ ಆಡದೇ ಇರುವವರಿಗೂ ಅವರು ಸಾಕಷ್ಟು ತರಬೇತಿಯನ್ನು ನೀಡುತ್ತಾರೆ. ಇದು ಸಂಪೂರ್ಣ ತಂಡದ ಪರಿಶ್ರಮ. ಇದರ ಶ್ರೇಯ ಸಂಪೂರ್ಣವಾಗಿ ಕೋಚ್‌ಗಳಿಗೆ ಸಲ್ಲುತ್ತದೆ," ಎಂದು ಹೇಳಿದರು.

"ಸಂಪೂರ್ಣವಾಗಿ ತಂಡದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ. ನಾವು ಒಟ್ಟಾಗಿ ಅಂಗಣಕ್ಕೆ ಇಳಿದು ಸಕಾರಾತ್ಮಕ ಕ್ರಿಕೆಟ್ ಆಡಲು ನಿರ್ಧರಿಸಿದ್ದೇವೆ ಮತ್ತು ವಿಷಯಗಳು ನಮ್ಮ ಪರ ತಿರುಗುತ್ತಿವೆ. ವಿಭಿನ್ನ ಸನ್ನಿವೇಶಗಳಲ್ಲಿ ವಿಭಿನ್ನ ಆಟಗಾರರು ನೆರವಾಗುತ್ತಿದ್ದಾರೆ. ಎಲ್ಲಾ ಸಂಗತಿಗಳು ನಮ್ಮ ಪರ ಬರುತ್ತಿರುವುದರಿಂದ ಖುಷಿಯಾಗುತ್ತಿದೆ. ಇನ್ನೂ ಹಲವು ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ಅನಿಸುತ್ತಿದೆ," ಎಂದು ಹೇಳಿದರು.

ಕಿಂಗ್ಸ್ ಇಲೆವೆನ್‌ ಪಂಜಾಬ್‌ ಕಳೆದ ಐದು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದು, ಪ್ಲೇಆಫ್‌ಗೆ ತಲುಪುವ ವಿಶ್ವಾಸವನ್ನು ಹೊಂದಿದೆ. ಮುಂದಿನ ಶುಕ್ರವಾರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಕೆ.ಎಲ್‌ ರಾಹುಲ್‌ ಪಡೆ ಸೆಣಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com